More

    ಪ್ರತಿ ಅಕ್ಷರಕ್ಕೊಂದು ಗಾದೆ ಕಟ್ಟುವ ಪೋರ

    ನಾಯಕನಹಟ್ಟಿ: ಮೊಬೈಲ್ ಪರಿಣಾಮ ಪರಸ್ಪರ ಮಾತನಾಡುವುದನ್ನೇ ಮರೆತ ಈ ಕಾಲದಲ್ಲಿ ಗಾದೆ, ಒಗಟುಗಳ ಬಗ್ಗೆ ಕೇಳಿದರೆ ಪಟ್ಟಣವೇಕೆ ಬಹುತೇಕ ಗ್ರಾಮೀಣರೂ ಗೊತ್ತಿಲ್ಲವೆಂದು ಹೇಳುವುದು ಮಾಮೂಲಾಗಿದೆ.

    ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳು ಗಾದೆ ಮಾತುಗಳನ್ನು ಅರಳು ಹುರಿದಂತೆ ಹೇಳುತ್ತಾರೆಂದರೆ ಶ್ಲಾಘನೀಯವೇ. ಅ-ಅತಿಯಾಸೆ ಗತಿಗೇಡು.. ಆ-ಆಪತ್ತಿಗಾದವನೇ ನೆಂಟ.. ಇ-ಇಬ್ಬರ ಜಗಳ ಮೂರನೆಯವನಿಗ ಲಾಭ.. ಈ-ಈಸಬೇಕು ಇದ್ದು ಜೈಸಬೇಕು.. ಉ-ಉಪ್ಪು ತಿಂದವನು ನೀರು ಕುಡಿಯಲೇಬೇಕು.. ಊ-ಊರಿಗೆ ಉಪಕಾರಿ, ಮನೆಗೆ ಅಪಕಾರಿ…

    ಹೀಗೆ ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೊಂದು ಗಾದೆ ಕಟ್ಟುವುದು ಇಲ್ಲಿನ ಮಕ್ಕಳ ವಿಶೇಷ.

    ಕುದಾಪುರ ಲಂಬಾಣಿಹಟ್ಟಿ ಕಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ವಿನಯ್ ಪ್ರಸಾದ್ ಗಾದೆ ಮಾತುಗಳನ್ನು ಹೇಳುವುದರಲ್ಲಿ ನಿಸ್ಸೀಮ.

    ಈ ಶಾಲೆಯಲ್ಲಿ 1-5ನೇ ತರಗತಿ ವರೆಗೆ ಒಟ್ಟು 25 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

    2 ಕೊಠಡಿಗಳ ನಲಿಕಲಿ ಶಾಲೆ ಇದು. ಕಲಿಕೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಕಳೆದ 2 ದಿನಗಳ ಹಿಂದೆ ಮಕ್ಕಳು ಸಾಮೂಹಿಕವಾಗಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಹೇಳುತ್ತಿರುವಾಗ ಬಾಲಕ ವಿನಯ್ ಪ್ರಸಾದ್, ತನ್ನ ಸಹಪಾಠಿಗಳು ಹೇಳುವ ಒಂದೊಂದು ಅಕ್ಷರಕ್ಕೂ ಒಂದೊಂದು ಕನ್ನಡ ಗಾದೆ ಮಾತನ್ನು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ಶಿಕ್ಷಣ ಸಚಿವರಿಂದ ಪ್ರಶಂಸೆ: ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಬಾಲಕನ ಜ್ಞಾಪಕ ಶಕ್ತಿ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಹೇಳಿಕೆ: ಕುದಾಪುರ ಲಂಬಾಣಿಹಟ್ಟಿಯಲ್ಲಿ ಕನ್ನಡ ಭಾಷೆಯನ್ನು ಕಲಿಸುವಲ್ಲಿ ಶಿಕ್ಷಕರ ಶ್ರಮ ಶ್ಲಾಘನೀಯ. ಅಲ್ಲಿನ ಶಾಲೆ ಕಲಿಕೆಯಲ್ಲಿ ಹಾಗೂ ಭೌತಿಕವಾಗಿ ಸುಂದರವಾಗಿದೆ. ಶಿಕ್ಷಕರು ವೃತ್ತಿಯಲ್ಲಿ ಬದ್ಧತೆ ತೋರಿದರೆ ಇಂತಹ ಕೆಲಸ ಸಾಧ್ಯ. ಗ್ರಾಮಸ್ಥರ ಸಹಕಾರವೂ ಶಾಲೆಯ ಅಭಿವೃದ್ಧಿಗೆ ಸಹಕಾರಿ ಆಗಿದೆ.

    ಮುಖ್ಯಶಿಕ್ಷಕ ಡಿ.ಕೃಷ್ಣಾರೆಡ್ಡಿ ಹೇಳಿಕೆ: ಸ್ಪಷ್ಟ ಓದು ಮತ್ತು ಶುದ್ಧ ಬರಹಕ್ಕೆ ಚಿಕ್ಕಂದಿನಿಂದಲೇ ಪ್ರೋತ್ಸಾಹ ನೀಡುತ್ತಿದ್ದೇವೆ. ಶಿಕ್ಷಕಿ ಸುಜಾತಾ, ಎಸ್‌ಡಿಎಂಸಿ, ಗ್ರಾಮಸ್ಥರ ಸಹಕಾರ ಚೆನ್ನಾಗಿದೆ. ಇದೆಲ್ಲದರ ಫಲವಾಗಿ ಶಾಲೆಯ ಎಲ್ಲ ಮಕ್ಕಳು ಓದಿನಲ್ಲಿ ಚುರುಕಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts