More

    ಜಲಾನಯನ, ಜಲಾಮೃತ ಕೃಷಿಗೆ ಸಹಕಾರಿ

    ನಾಯಕನಹಟ್ಟಿ: ಜಲಾನಯನ, ಜಲಾಮೃತ ಯೋಜನೆಗಳು ಬಯಲು ಸೀಮೆಯಲ್ಲಿ ಸುಸ್ಥಿರ ಕೃಷಿಗೆ ಸಹಕಾರಿಯಾಗಲಿವೆ ಎಂದು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಪ್ರಭಾತ್‌ಚಂದ್ರ ರೇ ಹೇಳಿದರು.

    ಸಮೀಪದ ಜೋಗಿಹಟ್ಟಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಕೃಷಿಹೊಂಡ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬರಗಾಲ ಹಾಗೂ ಲಾಕ್‌ಡೌನ್ ಸಂಕಷ್ಟದ ಕಾಲದಲ್ಲಿ ಕೃಷಿ ಚಟುವಟಿಕೆ ಪ್ರಗತಿಗೆ ಈ ಎರಡು ಯೋಜನೆಗಳು ಬಹಳಷ್ಟು ಸಹಕಾರಿ ಆಗಲಿವೆ ಎಂದರು.

    ಖಾತ್ರಿ ಯೋಜನೆ ಮೂಲಕ ಜಲಾಮೃತ-ಜಲಾನಯನ ಸೌಲಭ್ಯ ಅಳವಡಿಸಿಕೊಳ್ಳಬಹುದು. ಜಮೀನುಗಳಲ್ಲಿ ಬದು ನಿರ್ಮಾಣ, ಗಿಡ ನೆಡುವುದು, ಕೃಷಿ ಹೊಂಡವನ್ನು ನಿರ್ಮಿಸುವುದು, ಸಾವಯವ ಗೊಬ್ಬರ, ಎರೆಹುಳು ಘಟಕ, ರಾಸುಗಳಿಗೆ ಮೇವನ್ನು ಬೆಳೆಯುವುದು ಸೇರಿ ಹಲವು ಕೃಷಿ ಚಟುವಟಿಕೆಗಳನ್ನು ಕೈಗೊಂಡು ಜಮೀನು ಅಭಿವೃದ್ಧಿಗೊಳಿಸಬಹುದು. ಇದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಈ ಭಾಗದ ಎಲ್ಲ ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸುವುದು ಅಗತ್ಯವಾಗಿದೆ. ಅಲ್ಪ ಪ್ರಮಾಣದ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಲು ವೈಜ್ಞಾನಿಕ ಕೃಷಿ ಪದ್ಧತಿಯ ಅವಶ್ಯಕತೆ ಇದೆ. ಚಿತ್ರದುರ್ಗ ಜಿಲ್ಲೆಯು ಹಲವು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿದ್ದು, ಈ ಭಾಗದಲ್ಲಿ ಸಕಾಲಕ್ಕೆ ಮಳೆಯಾಗಬೇಕೆಂದರೆ ರೈತರು ತಮ್ಮ ಬದುಗಳಲ್ಲಿ ಗಿಡಮರಗಳನ್ನು ಬೆಳೆಸಬೇಕು. ನೀರಿನ ಮಿತಬಳಕೆಯ ಮಾದರಿಗಳನ್ನು ಅನುಸರಿಸಬೇಕು ಎಂದರು.

    ಕೃಷಿ ಜಂಟಿ ನಿರ್ದೇಶಕ ಡಾ.ಸದಾಶಿವ, ಕೃಷಿ ಉಪ ನಿರ್ದೇಶಕ ಡಾ.ಪ್ರಭಾಕರ್, ಕೃಷಿ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ವಿಶ್ವನಾಥ್, ರವಿಕುಮಾರ್, ಕೃಷಿ ಅಧಿಕಾರಿಗಳಾದ ಎನ್.ಗಿರೀಶ್, ಹೇಮಂತ್ ನಾಯ್ಕ, ಎಂ.ಎಸ್.ಶ್ರೀನಿವಾಸ್, ಸಹನಾ, ಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts