More

    ಮಂಡ್ಯ ಜಿಲ್ಲೆ ಸಾಂಸ್ಕೃತಿಕ ಕಲೆಗಳ ತವರೂರು: ಸಮಾಜಸೇವಕ ಕೆ.ಕೆ.ರಾಧಾಕೃಷ್ಣ ಹೇಳಿಕೆ

    ಮಂಡ್ಯ: ಮಂಡ್ಯ ಜಿಲ್ಲೆ ಸಾಂಸ್ಕೃತಿಕ ಕಲೆಗಳ ತವರೂರು. ಪ್ರತಿದಿನವೂ ನಾಟಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ, ಸಮಾಜಸೇವಕ ಕೆ.ಕೆ.ರಾಧಾಕೃಷ್ಣ ಕೀಲಾರ ಹೇಳಿದರು.
    ನಗರದ ಕಲಾಮಂದಿರದಲ್ಲಿ ರಾಜ್ಯಮಟ್ಟದ ಗ್ರಾಮೀಣ ನಾಟಕೋತ್ಸವದ ಅಂಗವಾಗಿ ಜನಾಂದೋಲನ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ  ಮಾತನಾಡಿದರು. ಜಿಲ್ಲೆಯನ್ನು ಸಾಂಸ್ಕೃತಿಕ ರಾಯಬಾರಿ ಜಿಲ್ಲೆಯನ್ನಾಗಿಸಿದ ಕೀರ್ತಿ ಕಲಾವಂತರಿಗೆ ಸೇರಿತ್ತದೆ. ನಿತ್ಯಸಚಿವ ಕೆ.ವಿ.ಶಂಕರಗೌಡ, ಡಾ.ಎಂ.ಎಚ್.ಅಂಬರೀಷ್ ಅವರವಂತಹ ದಿಗ್ಗಜರು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಸಾಮಾಜಿಕ ಬದಲಾವಣೆಯಲ್ಲಿ ಪೌರಾಣಿಕ ನಾಟಕಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ನುಡಿದರು.
    ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ ಮಾತನಾಡಿ, ಗ್ರಾಮೀಣ ನಾಟಕೋತ್ಸವಕ್ಕೆ ನೀಡುವತ್ತಿರುವ ಅನುದಾನ ಸಾಲದು. ಒಂದು ನಾಟಕಕ್ಕೆ ಸುಮಾರು ೫ ಲಕ್ಷ ರೂ ಖರ್ಚು ಬೀಳುತ್ತದೆ. ಸರ್ಕಾರ ೫೦ ಸಾವಿರ ರೂಗೂ ಹೆಚ್ಚು ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಬಸರಾಳು ಎಂ.ಜಿ.ತಿಮ್ಮೇಗೌಡ ಮಾತನಾಡಿದರು. ನಾಟಕ ನಿರ್ದೇಶಕ ಕೃಷ್ಣರಾಜು ರಾಮನಗರ, ರಂಗಭೂಮಿ ಕಲಾವಿದ ಕೆಂಚೇಗೌಡ, ಡಿ.ಎಸ್ ೪ ಸಂಘಟನೆ ರಾಜ್ಯಾಧ್ಯಕ್ಷ ವೆಂಟಕಗಿರಿಯಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts