More

    ಮೊಬೈಲ್ ಗೀಳಿನಿಂದ ಸಾಮಾಜಿಕ ಸಮಸ್ಯೆ ಹೆಚ್ಚಳ

    ನರಗುಂದ: ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಫೋನ್ ಅನ್ನು ಮಿತಿಮೀರಿ ಉಪಯೊಗಿಸುತ್ತಿದ್ದಾರೆ. ಇದರಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ದಿವಾಣಿ ನ್ಯಾಯಾಧೀಶೆ ಗಾಯತ್ರಿ ಎಚ್.ಡಿ. ಕಳವಳ ವ್ಯಕ್ತಪಡಿಸಿದರು.
    ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಹಾಗೂ ಸಾಮಾನ್ಯ ಕಾನೂನು ಅರಿವು-ನೆರವು ಕಾರ್ಯಕ್ರಮ ದ್ಘಾಟಿಸಿ ಅವರು ಮಾತನಾಡಿದರು. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ನಿದ್ರೆ, ದೃಷ್ಟಿ ಹಾಗೂ ಶ್ರವಣ ದೋಷಗಳು ಕಂಡು ಬರುತ್ತಿವೆ. 17 ವರ್ಷದೊಳಗಿನ ಯುವಕರಲ್ಲಿ ಹೆಚ್ಚಾಗಿ ಮಾನಸಿಕ ರೋಗ ಕಂಡು ಬರುತ್ತಿರುವುದು ತುಂಬ ಕಳವಳಕಾರಿ ಸಂಗತಿ ಎಂದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಆರ್.ಸಿ. ಕೊರವನವರ ಮಾತನಾಡಿ, ಯುವಕರು ಅತಿಯಾದ ಮೊಬೈಲ್ ಫೋನ್ ವೀಕ್ಷಣೆ, ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನಗಳಿಂದ ದೂರವಿರಬೇಕು ಎಂದರು.
    ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಜತೆಗೆ ನಮ್ಮನ್ನು ನಾವು ಹೆಚ್ಚು ಪ್ರೀತಿಸುವುದು, ಧನಾತ್ಮಕ ಚಿಂತನೆ ಮಾಡಬೇಕು ಎಂದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಆರ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿ.ವಿ. ಕೊಣ್ಣೂರ, ಶಿವಾನಂದ ಕುರಹಟ್ಟಿ, ಎಸ್.ಕೆ. ಹರಪ್ಪನಹಳ್ಳಿ, ಎಂ.ಬಿ. ಕುಲಕರ್ಣಿ, ಆರ್.ಆರ್. ನಾಯ್ಕರ, ಜೆ.ಸಿ. ಬೊಗಾರ, ಬಿ.ಬಿ. ಬಾರಕೇರ, ಪಿ.ಬಿ. ಚಿಕ್ಕನಗೌಡ್ರ, ಎ.ಎಲ್. ಅಂಬಿ, ವಿ.ಸಿ. ಪಾಟೀಲ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts