More

    ನಂಚಾರು ಸುದರ್ಶನ ಶಾಲೆ ಸರ್ಕಾರಕ್ಕೆ ಹಸ್ತಾಂತರ

    ಕೊಕ್ಕರ್ಣೆ: ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ನಂಚಾರು ಸುದರ್ಶನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಆಡಳಿತವನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಮಂಗಳವಾರ ಜರುಗಿತು.
    67 ವರ್ಷಗಳ ಹಿಂದೆ ಊರಿಗೊಂದು ಶಾಲೆ ಬೇಕೆನ್ನುವ ಛಲದಿಂದ ದಿ.ಸುಬ್ಬಣ್ಣ ಕರಬ ಅವರು ನಂಚಾರಿನಲ್ಲಿ ಶಾಲೆಯನ್ನು ಆರಂಭಿಸಿದ್ದು, ಪರಿಸರದ ಸಹಸ್ರಾರು ಮಕ್ಕಳ ವಿದ್ಯಾರ್ಜನೆಗೆ ಈ ಶಾಲೆ ಅಡಿಪಾಯವಾಗಿತ್ತು. ಪ್ರಸ್ತುತ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಈ ನಿಟ್ಟಿನಲ್ಲಿ ಸಂಚಾಲಕರು ನಂಚಾರು, ಸುತ್ತಮುತ್ತಲಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಯನ್ನು ಸರ್ಕಾರಿ ಶಾಲೆಯಾಗಿ ಮಾರ್ಪಾಡುಗೊಳಿಸಲು 2 ವರ್ಷದಿಂದ ಪ್ರಯತ್ನಿಸುತ್ತಿದ್ದರು. ಪ್ರಸ್ತುತ ವರ್ಷ 26 ಹೊಸ ಮಕ್ಕಳ ಸೇರ್ಪಡೆ, ಓರ್ವ ಶಿಕ್ಷಕರ ನೇಮಕಾತಿಯಾಗಿದೆ.

    ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಮುಂದಿನ ದಿನಗಳಲ್ಲಿ ಹೆಚ್ಚವರಿ ಇಬ್ಬರು ಶಿಕ್ಷಕರ ನೇಮಕ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗುವುದು. ಸರ್ಕಾರ ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಿದೆ. ಊರಿನವರ ಪ್ರೋತ್ಸಾಹದಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡರೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸೌಲಭ್ಯವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

    ನಾಲ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರಕಾಶ್ ನಾಯ್ಕ, ಉಪಾಧ್ಯಕ್ಷೆ ಸುಮಿತ್ರಾ ಶರತ್ ಶೆಟ್ಟಿ, ಎಪಿಎಂಸಿ ಉಡುಪಿ ಅಧ್ಯಕ್ಷ ಸತೀಶ್ ಶೆಟ್ಟಿ ನಂಚಾರು, ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಶಾಲೆ ಸಂಚಾಲಕ ವಿಶ್ವನಾಥ ಕರಬ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್, ಗ್ರಾಮಲೆಕ್ಕಿಗ ರಾಘವೇಂದ್ರ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಮೂರ್ತಿ ಅಡಿಗ, ಎಸ್.ಡಿ.ಎಂಸಿ. ಅಧ್ಯಕ್ಷ ಶೇಖರ ನಾಯ್ಕ, ನಾಲ್ಕೂರು ಗ್ರಾಮಪಂಚಾಯಿತಿ ಕಾರ್ಯದರ್ಶಿ ರಮೇಶ್ ನಾಯ್ಕ, ಸದಸ್ಯರಾದ ಸತೀಶ್ ಪೂಜಾರಿ, ವಿಜಯ ನಾಯ್ಕ, ರತ್ನ ಇದ್ದರು.

    ಸಿ.ಆರ್.ಪಿ.ದೀಪಾ ಸ್ವಾಗತಿಸಿದರು. ಮುಖ್ಯಶಿಕ್ಷಕ ಪ್ರವೀಣ್ ಶೆಟ್ಟಿ ನಿರೂಪಿಸಿ, ವಂದಿಸಿದರು. ಶಾಲೆ ಪ್ರಾರಂಭಿಸಲು ಸ್ಥಳ ಮತ್ತು ಕಟ್ಟಡ ದಾನ ನೀಡಿದ ಶಾಲಾ ಸಂಚಾಲಕ ವಿಶ್ವನಾಥ ಕರಬ ಅವರನ್ನು ಶಾಸಕ ಕೆ.ರಘುಪತಿ ಭಟ್ ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts