More

    ಉಡುಪಿಯಲ್ಲಿ ನೈರ್ಮಲ್ಯ ಗಣತಿ

    ಉಡುಪಿ: ರಾಜ್ಯದಲ್ಲೇ ಪ್ರಥಮ ಬಾರಿ ಉಡುಪಿ ಜಿಲ್ಲೆಯಲ್ಲಿ ನೈರ್ಮಲ್ಯ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಲು ಮನೆ ಮನೆ ಗಣತಿ ಪ್ರಾರಂಭಿಸಲಾಗಿದ್ದು, ಅ.2ರಿಂದ 12ರವರೆಗೆ ಜಿಲ್ಲೆಯ 155 ಗ್ರಾಮಗಳಲ್ಲಿ 2.41 ಲಕ್ಷ ಮನೆಗಳನ್ನು ಸಂದರ್ಶಿಸಲಾಗುತ್ತಿದೆ. ಈ ವರದಿ ಆಧಾರದಲ್ಲಿ ನೈರ್ಮಲ್ಯ ಸುಧಾರಣೆಗೆ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ.

    ಮನೆಗಳಲ್ಲಿ ಶೌಚಗೃಹ, ಇಂಗುಗುಂಡಿ ಇತ್ಯಾದಿಗಳ ಸಮಗ್ರ ವರದಿ ತಯಾರಿಸಲಾಗುತ್ತಿದೆ. ಇದಕ್ಕಾಗಿ 1,000 ಜನಸಂಖ್ಯೆಗೆ 4ರಂತೆ ಒಟ್ಟು 800 ಗಣತಿದಾರರನ್ನು ನಿಯೋಜಿಸಿ, ತರಬೇತಿ ನೀಡಲಾಗಿದೆ.

    ಏನೆಲ್ಲ ಕೇಳ್ತಾರೆ?: ಕುಟುಂಬಗಳ ವೈಯಕ್ತಿಕ ಶೌಚಗೃಹ ಬಳಕೆ, ಶೌಚ ಗುಂಡಿ ತುಂಬಿದಾಗ ವಿಲೇವಾರಿ ವಿಧಾನ, ಕುಟುಂಬ ಹಂತದಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ವಿಧಾನ, ದ್ರವತ್ಯಾಜ್ಯ ನಿರ್ವಹಣೆಯ ವಿಧಾನ ತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

    ಯೋಜನೆ ಮಾಹಿತಿ: ನರೇಗಾ ಯೋಜನೆಯಲ್ಲಿ ಮನೆಯಲ್ಲಿ ಉತ್ಪತ್ತಿಯಾಗುವ ಅಶುದ್ಧ ನೀರಿನ ನಿರ್ವಹಣೆಗೆ ಬಚ್ಚಲು ಗುಂಡಿ (ಸೋಕ್ ಪಿಟ್) ನಿರ್ಮಾಣ, ಹಸಿತ್ಯಾಜ್ಯ ನಿರ್ವಹಣೆಗೆ ಪೌಷ್ಟಿಕ ತೋಟಗಳ ನಿರ್ಮಾಣ, ಎರೆಹುಳು ಘಟಕ, ಗೊಬ್ಬರ ಗುಂಡಿ ನಿರ್ಮಾಣ ಇತ್ಯಾದಿ ಮಾಹಿತಿ ಜತೆಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಯೋಜನೆಯಡಿ ವರ್ಷಪೂರ್ತಿ ಶುದ್ಧ ಕುಡಿಯುವ ನೀರು ಒದಗಿಸುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನೀರಿನ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಪಡೆಯಲಾಗುತ್ತಿದ್ದು, ಅಂಥ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲು ನೆರವು ನೀಡಲಾಗುತ್ತದೆ. ಶೌಚಗೃಹಕ್ಕೆ ಅವಳಿಗುಂಡಿ ಮಹತ್ವ, ಮ್ಯಾನುವಲ್ ಸ್ಕಾೃವೆಂಜರ್ ಕಾಯ್ದೆ, ಹಸಿತ್ಯಾಜ್ಯ ನಿರ್ವಹಣೆ ವಿಧಾನ, ಒಣತ್ಯಾಜ್ಯ ನಿರ್ವಹಣೆ, ಋತುಚಕ್ರ ತ್ಯಾಜ್ಯ ನಿರ್ವಹಣೆ, ಬೂದುನೀರು ನಿರ್ವಹಣೆ ಅಗತ್ಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಗಣತಿ ಸಮಯದಲ್ಲಿ ಸಾರ್ವಜನಿಕರಿಗೆ ನೀಡಲು ಮುದ್ರಿಸಲಾಗಿರುವ ಮಾಹಿತಿ ಕೈಪಿಡಿಯಲ್ಲಿರುವ ಕ್ಯೂಆರ್ ಕೋಡ್ ಸ್ಮಾರ್ಟ್ ಫೋನ್ ಮೂಲಕ ಸ್ಕಾೃನ್ ಮಾಡಿ ಈ ಬಗೆಗಿನ ಮಾಹಿತಿಯ ವಿಡಿಯೋ ನೋಡಬಹುದು. ಪ್ರಥಮ ಕ್ಯೂಆರ್ ಕೋಡ್ ಬಳಸಲಾಗಿದೆ.

    ನೈರ್ಮಲ್ಯ ಗಣತಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳ ಎಲ್ಲ ಮನೆಗಳಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರು ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ. ಇದರ ಆಧಾರದಲ್ಲಿ ಇಡೀ ಜಿಲ್ಲೆಗೆ ಸ್ವಚ್ಛ ಕುಡಿಯುವ ನೀರು ಒದಗಿಸಲು ಮತ್ತು ಶುಚಿತ್ವದ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡಲು ಹಾಗೂ ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಾಗಲಿದೆ.
    – ಡಾ.ನವೀನ್ ಭಟ್
    ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts