More

    ನಾಗನೂರು ಮಠ್ಕಕೆ ಕೇಂದ್ರ ಸಚಿವ ಜೋಶಿ ಭೇಟಿ

    ಬೆಳಗಾವಿ: ನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಂದಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಇಲ್ಲಿನ ನಾಗನೂರು ರುದ್ರಾಕ್ಷಿ ಮಠಕ್ಕೂ ಶನಿವಾರ ಭೇಟಿ ನೀಡಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಅಲ್ಲಮ ಪ್ರಭು ಸ್ವಾಮೀಜಿಯವರ ಆಶೀರ್ವಾದ ಪಡೆದರು.

    ನಂತರ ಶ್ರೀಮಠದ ‘ಶಿವಾನುಭವ ಪತ್ರಿಕೆ’ಯ ಮೊದಲ ಸಂಚಿಕೆ ಪ್ರತಿಯನ್ನು ವೀಕ್ಷಿಸಿದ ಸಚಿವರಿಗೆ ಡಾ. ಸಿದ್ಧರಾಮ ಸ್ವಾಮೀಜಿ ಅವರು, ವಚನ ಸಾಹಿತ್ಯ ಮತ್ತು ಉಪನಿಷತ್ತುಗಳ ತೌಲನಿಕ ಅಧ್ಯಯನ, ಬಸವಣ್ಣನವರ ವಚನಗಳಲ್ಲಿ ಮಾನವೀಯತೆ ಕುರಿತು ಹಾಗೂ ನಿಂತುಹೋದ ಅಪರೂಪದ ನಿಯತಕಾಲಿಕೆಗಳ ಸಂಚಿಕೆಗಳನ್ನು ಸಂಗ್ರಹಿಸಿ ಇಲ್ಲಿ ಸಂರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

    1995ರಲ್ಲಿ ಬೆಳಗಾವಿ ನಗರದ ರುದ್ರಾಕ್ಷಿಮಠದ ಆವರಣದಲ್ಲಿ ಡಾ. ಸಿದ್ಧರಾಮ ಸ್ವಾಮೀಜಿ ಅವರಿಂದ ಸ್ಥಾಪನೆಗೊಂಡಿರುವ ವಚನ ಅಧ್ಯಯನ ಕೇಂದ್ರ ವಚನಗಳ ತಲಸ್ಪರ್ಶಿ ಅಧ್ಯಯನಕ್ಕಾಗಿ ಮೀಸಲಾದ ಸಂಸ್ಥೆಯಾಗಿದೆ. ಶಿವಾನುಭವ ಪತ್ರಿಕೆಯ 35 ಸಂಪುಟಗಳು ಒಂದೆಡೆ ಲಭ್ಯವಿರುವುದು ಈ ಗ್ರಂಥಾಲಯದಲ್ಲಿ ಮಾತ್ರ. ಹಳಯ ಅಪರೂಪದ ಗ್ರಂಥಗಳನ್ನು ಡಿಜಿಟಲೈಜ್ಜ್ ಮಾಡಲಾಗಿದೆ ಎಂದು ಮ.ನಿ.ಪ್ರ ಅಲ್ಲಮ ಪ್ರಭು ಸ್ವಾಮೀಜಿಗಳು ವಿವರಿಸಿದರು.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಶಾಸಕ ಅರವಿಂದ ಬೆಲ್ಲದ ಹಾಗೂ
    ಎಸ್.ಜಿ. ಬಾಳೇಕುಂದ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts