More

    ಶಿವಮೊಗ್ಗದಲ್ಲಿ ರಂಗೇರಿದ ನಾಡಹಬ್ಬ ದಸರಾ ಕಲರವ

    ಶಿವಮೊಗ್ಗ: ನಾಡಹಬ್ಬ ದಸರಾವನ್ನು ಮೈಸೂರು ಬಿಟ್ಟರೆ ಅತ್ಯಂತ ವಿಜೃಂಭಣೆಯಿಂದ ಶಿವಮೊಗ್ಗದಲ್ಲಿ ಆಚರಿಸುವುದು ಸಂಪ್ರದಾಯವಾಗಿದೆ. ಈ ಬಾರಿ ಬರದ ನಡುವೆಯೂ ದಸರಾ ಮೆರುಗು ಹೆಚ್ಚುತ್ತಿದೆ. ಮಹಿಳಾ ದಸರಾ ಸಮಿತಿ, ಯುವ ದಸರಾ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿ, ರಂಗ ದಸರಾ ಸಮಿತಿ, ಆಹಾರ ದಸರಾ ಸಮಿತಿ ಸೇರಿ ಪಾಲಿಕೆಯು ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

    ಮಕ್ಕಳ ದಸರಾ ಸಮಿತಿಯಿಂದ ಸೋಮವಾರ ನೆಹರು ಮೈದಾನದಲ್ಲಿ ಮಕ್ಕಳ ವಿವಿಧ ಹಂತದಲ್ಲಿ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಪ್ರಬಂಧ, ಕ್ಲೇ ಮಾಡ್ಲಿಂಗ್, ಛದ್ಮವೇಷ, ಜ್ಞಾಪಕ ಶಕ್ತಿ ಪರೀಕ್ಷೆ ಹಾಗೂ ಮಕ್ಕಳ ಕ್ರೀಡಾಕೂಟ ನಡೆಯಿತು. ಮಕ್ಕಳ ಕಲರವ ರಂಗೇರಿದ್ದು, 500ಕ್ಕೂ ಅಧಿಕ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಉತ್ಸಾಹದಿಂದ ಭಾಗವಹಿಸಿದ್ದರು.
    ಮೇಯರ್ ಎಸ್.ಶಿವಕುಮಾರ್ ಅವರು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಉಪ ಮೇಯರ್ ಲಕ್ಷ್ಮೀ ಶಂಕರನಾಯಕ್, ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್, ಸಮಿತಿ ಸದಸ್ಯರಾದ ಸುನೀತಾ ಅಣ್ಣಪ್ಪ, ಧೀರರಾಜ್ ಹೊನ್ನವಿಲೆ, ಇ.ವಿಶ್ವಾಸ್, ಮಂಜುಳಾ ಶಿವಣ್ಣ, ಅನಿತಾ ರವಿಶಂಕರ್, ಪಾಲಿಕೆ ಅಧಿಕಾರಿ ವರ್ಗ, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts