More

    ಸ್ವಚ್ಛತಾ ವಸ್ತು ತಯಾರಿಕೆಗೆ ಸಾಲ

    ಮಂಡ್ಯ: ಸ್ವಚ್ಛ ಭಾರತ ಯೋಜನೆಯನ್ನು ಮಾದರಿಯಾಗಿಟ್ಟುಕೊಂಡು ಬ್ಯಾಂಕ್‌ಗಳಿಂದ ಆರೋಗ್ಯ ಮತ್ತು ಸ್ವಚ್ಛತಾ ವಸ್ತುಗಳ ತಯಾರಿಕೆ ಸಾಲ ಪಡೆದರೆ, ನಬಾರ್ಡ್‌ನಿಂದಲೂ ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ನಬಾರ್ಡ್‌ನ ಡಿಡಿಎಂ ಹರ್ಷಿತಾ ಹೇಳಿದರು.
    ನಗರದ ನೆಹರು ಯುವ ಕೇಂದ್ರದ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ವಿಕಸನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ನೈರ್ಮಲ್ಯ ಸಾಕ್ಷರತಾ ಅಭಿಯಾನದಲ್ಲಿ ಮಾತನಾಡಿದರು.
    ಸ್ವಚ್ಛತೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಿದೆ. ಜನರಿಗೆ ಅವಶ್ಯಕವಾಗಿರುವ ಯೋಜನೆಗಳನ್ನು ಪೂರೈಸಲು ಬ್ಯಾಂಕ್ ಮುಂದಾಗಲಿದೆ. ಮಹಿಳೆಯರಿಗೆ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ವಸ್ತುಗಳ ತಯಾರಿಕೆಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರಕುತ್ತದೆ. ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಈ ಯೋಜನೆಯಡಿ ಉಪಯೋಗ ಪಡೆದುಕೊಳ್ಳಬಹುದು ಎಂದು ವಿವರಿಸಿದರು.
    ಬಯಲುಶೌಚ ಮುಕ್ತವಾಗಿಸಲು 2014 ಅಕ್ಟೋಬರ್‌ನಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಲಾಯಿತು. 2018ರಲ್ಲಿ ಮೈಸೂರು ದಸರಾದಲ್ಲಿ ಮಂಡ್ಯ ಜಿಲ್ಲೆಯ ಸ್ತಬ್ದ ಚಿತ್ರ ಪ್ರದರ್ಶಿಸಿ ಬಹುಮಾನ ಪಡೆಯಲಾಗಿತ್ತು. ಬಯಲು ಶೌಚ ಮುಕ್ತವಾಗಿದ್ದು, ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಬಹಳ ಕಷ್ಟವಾಗಿದೆ. ಆರೋಗ್ಯ ಇಲಾಖೆಯವರು ನೀರಿನ ಪರೀಕ್ಷೆ ನಡೆಸುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುತ್ತಿದ್ದಾರೆ. ನಾವು ಆರೋಗ್ಯವಂತರಾಗಿರಲು ಒಬ್ಬಂಟಿಯಾಗಿ ಮಾಡಲು ಸಾಧ್ಯವಿಲ್ಲ. ಸಮುದಾಯದವರು ಒಟ್ಟಾಗಿ ಶ್ರಮವಹಿಸಿದರೆ ಸ್ವಚ್ಛತೆ, ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.
    ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಜಿಪಂ ಅಧಿಕಾರಿ ವೀರಣ್ಣ, ಶಿವಕುಮಾರ್, ವಿಕಸನ ಸಂಸ್ಥೆಯ ಸಂಯೋಜಕರಾದ ಅನಿಲ್‌ರಾಜ್, ಕೆಂಪಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts