More

    ಮೈಸೂರಿಗರಿಗೆ ಗುಡ್​ ನ್ಯೂಸ್​: ಮುಚ್ಚಳಿಕೆ ಬರೆಸಿಕೊಂಡು ಜ್ಯುಬಿಲಿಯೆಂಟ್ ಕಾರ್ಖಾನೆಯ ಮೊದಲ ಕರೊನಾ ಪಾಸಿಟಿವ್ ವ್ಯಕ್ತಿಯ ಡಿಸ್ಚಾರ್ಜ್!

    ಮೈಸೂರು: ಕರೊನಾ ವೈರಸ್​ ಸೋಂಕಿನ ವಿಚಾರದಲ್ಲಿ ಡೇಂಜರ್​ ಝೋನ್​ನಲ್ಲಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಗುಡ್​ ನ್ಯೂಸ್​ ಒಂದು ಸಿಕ್ಕಿದೆ. ಟ್ರಾವೆಲ್​ ಹಿಸ್ಟರಿಯಿಲ್ಲದೇ ಕರೊನಾ ಪಾಸಿಟಿವ್​ ವರದಿಯಾಗಿ ಆತಂಕ ಮೂಡಿಸಿದ್ದ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ಮೊದಲ ವ್ಯಕ್ತಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ಮೇಟಗಳ್ಳಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೂ ಮುಂದಿನ 14 ದಿನಗಳ ಕಾಲ ಹೋಮ್ ಕ್ವಾರಂಟೈನ್​ನಲ್ಲಿ ಇರುವಂತೆ ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಧಿಕಾರಿಗಳಿಗೆ‌ ಮುಚ್ಚಳಿಕೆ ಬರೆದುಕೊಟ್ಟು ಕರೊನಾ ಗುಣಮುಖ ವ್ಯಕ್ತಿ ಬಿಡುಗಡೆಯಾಗಿದ್ದಾನೆ.

    ಜ್ಯುಬಿಲಿಯೆಂಟ್ ಕಾರ್ಖಾನೆ ಪ್ರಕರಣಗಳ ಪೈಕಿ ಮೊದಲ ಪ್ರಕರಣವಾಗಿದ್ದ ವ್ಯಕ್ತಿಯನ್ನು ರಾಜ್ಯ ಸರ್ಕಾರ ರೋಗಿ ನಂ. 52 ಎಂದು ಗುರುತಿಸಿತ್ತು. ಆತನ ಪತ್ನಿ ಹಾಗೂ ಮಾವನಿಗೂ ಸಹ ಕರೊನಾ ಪಾಸಿಟಿವ್ ಇದೆ. ಈಗಲೂ ಐಸೋಲೇಷನ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಸಂಪರ್ಕದಲ್ಲಿದ್ದ ಹಲವಾರು ಮಂದಿ ಕ್ವಾರಂಟೈನ್​ನಲ್ಲಿ ಇದ್ದಾರೆ. ಅದರಲ್ಲಿ ಕೆಲವರಿಗೆ ಪಾಸಿಟಿವ್​ ಕೂಡ ಇದೆ. (ದಿಗ್ವಿಜಯ ನ್ಯೂಸ್​)

    PHOTOS| ಆರೋಗ್ಯಯುತ ಕೋಶಗಳಿಗೆ ದಾಳಿ ಮಾಡುವ ಕರೊನಾ ವೈರಸ್​ ಸರಣಿ ಚಿತ್ರಗಳು ಸೆರೆ!

    ಲಾಕ್​ಡೌನ್​ ವೇಳೆ ಆರೋಪಿಗಳ ಪ್ರಯಾಣಕ್ಕೆ ಸಹಾಯ ಮಾಡಿದ ಹಿರಿಯ ಐಪಿಎಸ್‌ ಅಧಿಕಾರಿಗೆ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts