More

    ಪಾಲಿಕೆ ಗಮನ ಸೆಳೆಯಲು ಪತಿ ಹಾಗೂ‌ ನಾಲ್ಕು ಮಕ್ಕಳೊಂದಿಗೆ ಬೀದಿ ಗುಡಿಸಿದ ಮಹಿಳಾ ಕಾರ್ಪೊರೇಟರ್

    ಮೈಸೂರು: ಸ್ವಚ್ಛತಾ ಕಾರ್ಯದ ಬಗ್ಗೆ. ಪೌರ ಕಾರ್ಮಿಕರ ಕೊರತೆಯ ಬಗ್ಗೆ ಮೈಸೂರು ಮಹಾನಗರ ಪಾಲಿಕೆಯ ಗಮನ ಸೆಳೆಯುವುದಕ್ಕೆ ಮಹಿಳಾ ಕಾರ್ಪೊರೇಟರ್ ಒಬ್ಬರು ನಡೆಸಿದ ವಿನೂತನ ಪ್ರತಿಭಟನೆ ಅದರ ಗಮನಸೆಳೆದಿದೆಯೋ ಗೊತ್ತಿಲ್ಲ. ರಾಜ್ಯದ ಅನೇಕ ಜನರ ಗಮನವಂತೂ ಸೆಳೆದಿದೆ.

    ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 61ರಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಇರುವವರಲ್ಲಿ ಬಹುತೇಕರು ಮಹಿಳೆಯರು. ಇದರಿಂದಾಗಿ ಸ್ವಚ್ಛತಾಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಪೌರ ಕಾರ್ಮಿಕರ ನೇಮಕ ಆಗಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಬಹಳದಿನಗಳಿಂದ ಆಗ್ರಹಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಈ ರೀತಿ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಕಾರ್ಪೊರೇಟರ್ ಶೋಭಾ ಹೇಳಿದ್ದಾರೆ.

    ಪೌರಾಯುಕ್ತರಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ ಕಾರ್ಪೊರೇಟರ್​ ಶೋಭಾ ಅವರು ತಮ್ಮ ಪತಿ ಮತ್ತು ನಾಲ್ವರು ಮಕ್ಕಳೊಂದಿಗೆ ಭಾನುವಾರ ಬೆಳಗ್ಗೆ ರಸ್ತೆಗೆ ಇಳಿದು ಪೌರ ಕಾರ್ಮಿಕರ ಕೆಲಸವನ್ನು ಸ್ವತಃ ಮಾಡಿದರು. ಅಲ್ಲದೆ, ಮಾಧ್ಯಮಗಳ ಮೂಲಕ ಮೈಸೂರು ಮಹಾನಗರ ಪಾಲಿಕೆಯ ಗಮನಸೆಳೆಯಲು ಪ್ರಯತ್ನಿಸಿದ್ದು, ಸ್ವಚ್ಛತಾಕಾರ್ಯ ಸರಾಗವಾಗಿ ನಡೆದು ಸಮಸ್ಯೆ ಪರಿಹಾರ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆಯಿಂದ ಇದುವರೆಗೂ ಪ್ರತಿಕ್ರಿಯೆ ಸಿಕ್ಕಿಲ್ಲ. (ದಿಗ್ವಿಜಯ ನ್ಯೂಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts