More

    ಮೈಶುಗರ್ಸ್‌; ರೈತರಿಗೆ 70.46 ಕೋಟಿ ರೂ ಬಿಲ್ಪಾವತಿ: ಸಚಿವ ಶಿವಾನಂದ ಎಸ್ ಪಾಟೀಲ

    ಬೆಂಗಳೂರು:
    ದಿ. ಮೈಸೂರು ಸಕ್ಕರೆ ಕಂಪನಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರೂ. 70.46 ಕೋಟಿ ರೂ ಬಿಲ್ಲನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲಾಗಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಿವನಂದ ಎಸ್ ಪಾಟೀಲ ತಿಳಿಸಿದರು.
    ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಕಬ್ಬು ಅರೆಯುವ ಘಟಕದ ಸಮಾಥ್ರ್ಯವನ್ನು 5,000 ಟಿ.ಸಿ.ಡಿಯಿಂದ 10,000 ಟಿ.ಸಿ.ಡಿಗೆ ವಿಸ್ತರಿಸುವ ಹಾಗೂ ವಿದ್ಯುತ್ ಘಟಕವನ್ನು ಪ್ರಾರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.
    2023-24ರಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬನ್ನು ಅರೆದು, 1,68,238 ಕ್ವಿಂಟಾಲ್ ಸಕ್ಕರೆಯನ್ನು ಉತ್ಪಾದಿಸಲಾಗಿದೆ. ಇದರಲ್ಲಿ 1,38,360 ಕ್ವಿಂಟಾಲ್ ಸಕ್ಕರೆಯನ್ನು ಮಾರಾಟ ಮಾಡಲಾಗಿದ್ದು, ಇದರಿಂದ ರೂ. 51,66,79,185.00ಗಳಷ್ಟು ಆದಾಯ ಬಂದಿದೆ. ಪ್ರಾರಂಭದಲ್ಲಿ ರಾಜ್ಯ ಸರ್ಕಾರದಿಂದ 50 ಕೋಟಿಗಳನ್ನು ಬಿಡುಗಡೆ ಮಾಡಿತ್ತು ಎಂದರು.
    15,570 ಮೆ. ಟನ್ ಕಾಕಂಬಿ ಉತ್ಪಾದನೆ ಮಾಡಿದ್ದು, ಇದರಿಂದ 18, 74,22,554.00 ಗಳ ಅದಾಯ ಬಂದಿದೆ. ವಿದ್ಯುತ್ ಘಟಕದಲ್ಲಿ 12,21,000 ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದರು.
    ಇದೇ ಸಮಯದಲ್ಲಿ ಮರಿತಿಬ್ಬೇಗೌಡ ಅವರು ಕಬ್ಬು ಪೂರೈಸಿದ ರೈತರಿಗೆ ಸಕಾಲದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಲ್ಲು ಪಾವತಿ ಮಾಡಿರುವುದಕ್ಕೆ ಸಿಎಂ, ಡಿಸಿಎಂ, ಸಚಿವರಿಗೆ ಹಾಗೂ ಜಿಲ್ಲಾ ಉಸುವಾರಿ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

    ಮಹಾನಗರ ಪಾಲಿಕೆಗಳಲ್ಲಿ ಶೀಘ್ರವಾಗಿ
    ವಾರ್ಡ್ ಸಮಿತಿ ರಚನೆ: ಭೈರತಿ ಸುರೇಶ್
    ಮಹಾನಗರ ಪಾಲಿಕೆಗಳಲ್ಲಿ ವಾರ್ಡ್ ಸಮಿತಿ ರಚನೆ ವಿಳಂಬವಾಗಿರುವುದನ್ನು ಒಪ್ಪಿಕೊಂಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಈ ನಿಟ್ಟಿನಲ್ಲಿ ಕೂಡಲೆ ಕ್ರಮ ತೆಗೆದುಕೊಳ್ಳುವುದಾಗಿ ಮೇಲ್ಮನೆಯಲ್ಲಿ ಭರವಸೆ ನೀಡಿದ್ದಾರೆ.
    ಬಿಜೆಪಿಯ ಡಾ.ತಳವಾರ್ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಅವರು, ವಾರ್ಡ್ ಸಮಿತಿ ಮಾಡಲು 1976 ರಲ್ಲೇ ನಿಯಮ ಮಾಡಿದ್ದಾರೆ. ಸಮಿತಿ ರಚನೆ ಮಾಡಿ ಏರಿಯಾದಲ್ಲಿ ಸಭೆಗಳನ್ನು ನಡೆಸಲಾಗುವುದು ಎಂದರು.
    ಸರ್ಕಾರಿ ಅಧಿಕಾರಿಗಳನ್ನ ನೋಡೆಲ್ ಆಫಿಸರ್‌ಗಳನ್ನಾಗಿ ಮಾಡಿ ಸಮಿತಿ ರಚನೆ ಮಾಡಬೇಕು. ವಾರ್ಡ್ ಸಮಿತಿಯಲ್ಲಿ ಎಲ್ಲಾ ಮತದಾರರು ಸದಸ್ಯರಾಗಿತ್ತಾರೆ. ವಾರ್ಡ ಸಮಿತಿಗೆ ಆಯಾ ಕಾರ್ಪೋರೇಟರ್‌ಗಳೇ ಅಧ್ಯಕ್ಷರಾಗಿರುತ್ತಾರೆ ಎಂದರು.
    ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳುತ್ತೀರಿ. ಕಳೆದ ಏಳೆಂಟು ತಿಂಗಳಿಂದ ಇದೇ ಉತ್ತರ ಬರುತ್ತಿದೆ. ಸರ್ಕಾರದ ನಿರ್ಲಕ್ಷದಿಂದ ವಾರ್ಡ್ ಅಭಿವೃದ್ದಿಗಾಗಿ ಜನರ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತಿದೆ ಎಂದು ಸಾಬಣ್ಣ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts