More

    ಪಿಎಫ್​ಐ ನಿಷೇಧಕ್ಕೆ ಮುಸ್ಲಿಂ ಸಂಘಟನೆಗಳಿಂದಲೂ ಸ್ವಾಗತ..

    ನವದೆಹಲಿ: ಕೇಂದ್ರ ಸರ್ಕಾರ ಪಾಪ್ಯುಲರ್​ ಫ್ರಂಟ್ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆ ಮೇಲೆ ಐದು ವರ್ಷಗಳ ವರೆಗೆ ನಿಷೇಧ ಹೇರಿರುವುದನ್ನು ಮುಸ್ಲಿಂ ಸಂಘಟನೆಗಳು ಕೂಡ ಸ್ವಾಗತಿಸಿವೆ.

    ಎಲ್ಲರೂ ಸಹನೆಯಿಂದ ಇರಬೇಕು, ಸರ್ಕಾರದ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಬೇಕು ಎಂಬುದಾಗಿ ಆಲ್​ ಇಂಡಿಯಾ ಸೂಫಿ ಸಜ್ಜದನಷಿನ್ ಕೌನ್ಸಿಲ್​ ಅಧ್ಯಕ್ಷ ನಾಸಿರುದ್ದೀನ್​ ಚಿಸ್ಟಿ ಹೇಳಿದ್ದಾರೆ.

    ಪಿಎಫ್​​ಐ ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಈ ನಿಷೇಧವನ್ನು ರಾಷ್ಟ್ರದ ಹಿತಾಸಕ್ತಿಯಿಂದ ಮಾಡಲಾಗಿದೆ ಎಂದು ಅಜ್ಮೇರ್​ನ ಸೈಯದ್​ ಝೈನುಲ್ ಅಬಿದಿನ್​ ಹೇಳಿದ್ದಾರೆ.

    ಪಿಎಫ್​ಐ ತೀವ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಅದನ್ನು ನಿಷೇಧಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮುಸ್ಲಿಂ ಸ್ಟುಡೆಂಟ್ಸ್ ಆರ್ಗನೈಸೇಷನ್​ ಆಫ್ ಇಂಡಿಯಾ ಹೇಳಿದೆ. –ಏಜೆನ್ಸೀಸ್

    ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದ್ದೇಕೆ?: ಗೃಹ ಸಚಿವರು ನೀಡಿದ ಸ್ಪಷ್ಟನೆ ಇಲ್ಲಿದೆ..

    ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರ ಮರಣ, ಮೈದುನನ ಸ್ಥಿತಿ ಗಂಭೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts