More

    ಫೋಟೋದಲ್ಲಿ ಮಕ್ಕಳ ಚಿತ್ರ ಬದಲಿಗೆ 666 ನಂ. ಗೋಚರ: ಅರ್ಥ ತಿಳಿದ ತಾಯಿಯ ಎದೆಯಲ್ಲಿ ಢವಢವ!

    ಎಡಿನ್​ಬರ್ಗ್​: ವಿಚಿತ್ರ ಘಟನೆಯೊಂದರಲ್ಲಿ ಮಕ್ಕಳ ಫೋಟೋ ತೆಗೆದ ಸ್ಕಾಟ್ಲೆಂಡ್​ ಮಹಿಳೆಗೆ ಮಕ್ಕಳ ಚಿತ್ರದ ಬದಲಾಗಿ ಫೋಟೋದಲ್ಲಿ ‘666’ ಎಂಬ ನಿಗೂಢ ಚಿಹ್ನೆ ನೋಡಿ ಹೆದರಿದ್ದಾಗಿ ಹೇಳಿದ್ದಾಳೆ.

    ಹೆಸರೇಳಲು ಇಚ್ಛಿಸದ ಮಹಿಳೆ ಫೋಟೋದಲ್ಲಿನ ನಿಗೂಢ ಗುರುತನ್ನು ನೋಡಿ ಈಗಲೂ ಭಯದಲ್ಲಿರುವುದಾಗಿ ತಿಳಿಸಿದ್ದಾಳೆ. ಕಳೆದ ಮಂಗಳವಾರ ರಾತ್ರಿ ಶಾಪಿಂಗ್​ ಮುಗಿಸಿ ಮಕ್ಕಳನ್ನು ಕರೆದುಕೊಂಡು ಮನೆಗೆ ಹಿಂದಿರುಗುವಾಗ ಅಬರ್ಡೀನ್​ನ ಸೀಟನ್​ ಏರಿಯಾದಲ್ಲಿರುವ ಫುಟ್​ಬಾಲ್​ ಮೈದಾನದಲ್ಲಿ ಕುಟುಂಬದೊಂದಿಗೆ ಕೆಲವು ಫೋಟೋಗಳನ್ನು ತೆಗೆದುಕೊಂಡಿದ್ದಳು.

    ಇದನ್ನೂ ಓದಿ: ಅಡುಗೆ ಮನೆಯಿಂದ ಕೇಳಿಬಂದ ವಿಚಿತ್ರ ಶಬ್ದದ ಬೆನ್ನಲ್ಲೇ ಫೋಟೋ ಕ್ಲಿಕ್ಕಿಸಿ ನೋಡಿದವನಿಗೆ ಕಾದಿತ್ತು ಶಾಕ್​!

    ಆರಂಭದಲ್ಲಿ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸದ ಮಹಿಳೆ ಮನೆಗೆ ಹೋದ ಬಳಿಕ ಒಂದೊಂದಾಗಿ ಫೋಟೋಗಳನ್ನು ನೋಡುವಾಗ ಫೋಟೋವೊಂದರಲ್ಲಿ ನೀರುಗಡ್ಡೆಯಲ್ಲಿ ಬರೆದಿರುವಂತೆ ವಿಲಕ್ಷಣವಾಗಿ ಕಾಣುವ 666 ನಂಬರ್​ ಅನ್ನು ನೋಡಿದ್ದಾಳೆ. ನಂಬರ್​ ಹೇಗೆ ಫೋಟೋದಲ್ಲಿ ಬಂತು ಎಂದು ತಲೆ ಕೆಡಿಸಿಕೊಂಡಿರುವ ಮಹಿಳೆ ಇದೀಗ ಅದರ ಅರ್ಥವನ್ನು ತಿಳಿದು ಮತ್ತಷ್ಟು ಚಿಂತಿತರಾಗಿದ್ದಾರೆ.

    ಫೋಟೋದಲ್ಲಿ ಮಕ್ಕಳ ಚಿತ್ರ ಬದಲಿಗೆ 666 ನಂ. ಗೋಚರ: ಅರ್ಥ ತಿಳಿದ ತಾಯಿಯ ಎದೆಯಲ್ಲಿ ಢವಢವ!

    ಅಂದಹಾಗೆ 666 ಎನ್ನುವುದು ಬೈಬಲ್‌ನ ಬಹಿರಂಗ ಪುಸ್ತಕದಲ್ಲಿ ‘ಮೃಗದ ಸಂಖ್ಯೆ’ ಮತ್ತು ಇದು ದೆವ್ವದೊಂದಿಗೆ ಹಾಗೂ ಅಪೋಕ್ಯಾಲಿಪ್ಸ್​ನಲ್ಲಿ ವಿಶ್ವದ ಅಂತ್ಯದೊಂದಿಗೆ ಸಂಬಂಧ ಹೊಂದಿದೆಯಂತೆ. ಒಮೆನ್​ ಸಿನಿಮಾದಂತಹ ಪ್ರಖ್ಯಾತ ಸಂಸ್ಕೃತಿಯಲ್ಲಿಯೂ ಸಾವು ಮತ್ತು ವಿನಾಶವನ್ನು ತರುತ್ತದೆ ಎಂದು ಕ್ರೈಸ್ಟ್​ ವಿರೋಧಿಗಳ ಮೇಲೆ ಈ ನಂಬರ್​ ಅನ್ನು ಬರೆಯಲಾಗಿತ್ತಂತೆ.

    ಇದನ್ನೂ ಓದಿ: ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ, ಮದ್ವೆಯಾಗಿರುವ ಛತ್ತೀಸ್​ಗಢ ಮಹಿಳೆಯ ಹೊಸ ಸಾಹಸ!

    ಇದೀಗ ಫೋಟೋದಿಂದ ಭಯಗೊಂಡಿರುವ ಮಹಿಳೆ ಏನು ಮಾಡುವುದು ಎಂದು ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿ ಸಲಹೆ ಕೇಳಿದ್ದಾಳೆ. ಈ ಬಗ್ಗೆ ಅನೇಕ ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ನಾನೇನು ಮೂಢನಂಬಿಕೆ ವ್ಯಕ್ತಿಯಲ್ಲ. ಫೋಟೋದಲ್ಲಿ ನನಗೆ ಕೇವಲ ನಂಬರ್​ ಮಾತ್ರ ಕಾಣಿಸುತ್ತಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ನಿಜಕ್ಕೂ ಭಯಾನಕವಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

    ನಾನು ಬದುಕಲಿ ಎಂದು ಪ್ಲೀಸ್​ ಪ್ರಾರ್ಥಿಸಿ ಎನ್ನುತ್ತಲೇ ಕೊನೆಯುಸಿರೆಳೆದ ನಟಿ ದಿವ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts