More

    ಮುಳುಕೆರೆ ಶಾಲೆ ದೇವಸ್ಥಾನಕ್ಕೆ ಸ್ಥಳಾಂತರ

    ತ್ಯಾಗರ್ತಿ: ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಮುಳುಕೆರೆ ಸರ್ಕಾರಿ ಶಾಲೆಯನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರ ಮಾಡಲು ಶಿಕ್ಷಣ ಇಲಾಖೆ ಅಽಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ತೀರ್ಮಾನ ಕೈಗೊಂಡರು.

    ಮುಳುಕೆರೆ ಗ್ರಾಮಸ್ಥರು ಬುಧವಾರ ಶಾಲಾ ಕಟ್ಟಡ ದುರಸ್ತಿಗೆ ಆಗ್ರಹಿಸಿ ಶಾಲೆ ಬಂದ್ ಮಾಡಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ಕ್ಷೇತ್ರ ಶಿಕ್ಷಣಾಽಕಾರಿ ಕೆ.ಟಿ.ನಿಂಗಪ್ಪ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ವಿವಿಧ ಅಽಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಲೆಯ ಕಟ್ಟಡ ಪರಿಶೀಲಿಸಿದರು. ಗ್ರಾಮಸ್ಥರು ಹಾಗೂ ಗ್ರಾಪಂ ಅಧ್ಯಕ್ಷರು ಸದಸ್ಯರ ಜತೆಗೆ ಚರ್ಚಿಸಿ ಮಕ್ಕಳಿಗೆ ತೊಂದರೆ ಆಗದಂತೆ ತಾತ್ಕಾಲಿಕವಾಗಿ ಊರಿನ ದೇವಸ್ಥಾನದಲ್ಲಿ ಶಾಲೆ ನಡೆಸಲು ತೀರ್ಮಾನಿಸಲಾಯಿತು.
    ಮುಂದಿನ ದಿನಗಳಲ್ಲಿ ಕಟ್ಟಡ ದುರಸ್ತಿ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬAಽಸಿ ಇಲಾಖೆಯ ಹಿರಿಯ ಅಽಕಾರಿಗಳು, ಸಚಿವರು, ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರಾಮಸ್ಥರ ಮನವೊಲಿಸಿ ಶಾಲೆ ಪ್ರಾರಂಭಿಸಲಾಗಿದೆ. ಕ್ಷೇತ್ರ ಸಮನ್ವಯಾಽಕಾರಿ ಅನ್ನಪೂರ್ಣಾ, ಶಿಕ್ಷಣ ಸಂಯೋಜಕರಾದ ಶೇಖರ್, ಉಮೇಶ್, ಚಂದ್ರಪ್ಪ, ಬರೂರು ಗ್ರಾಪಂ ಅಧ್ಯಕ್ಷೆ ಚಂದಮ್ಮ, ಸದಸ್ಯರಾದ ಶಿವಮೂರ್ತಿ ಗುತ್ನಳ್ಳಿ, ಪ್ರಮುಖರಾದ ಕನ್ನಪ್ಪ ಮುಳುಕೆರೆ, ಪರಸಪ್ಪ, ಶೇಖರಪ್ಪ, ಮಂಜುನಾಥ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts