More

    ಇಳಕಲ್ ನಾಟಕ ಕಂಪನಿಗಳಿಗೆ ಮಾರುಹೋಗಲ್ಲ; ಮಾಜಿ ಶಾಸಕ ಮಾನಪ್ಪ ಡಿ.ವಜ್ಜಲ್ ಅನಿಸಿಕೆ

    ಮುದಗಲ್: ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯ ಆಗಿಲ್ಲ ಎಂದು ಮಾಜಿ ಶಾಸಕ, ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಆರೋಪಿಸಿದರು.

    ಪಟ್ಟಣದ ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ಸಭೆ ಮತ್ತು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಕಾಂಗ್ರೆಸ್ ರಾಜ್ಯ ನಾಯಕರ ಮುಖ ನೋಡಿ ಕ್ಷೇತ್ರದ ಮತದಾರರು ಡಿ.ಎಸ್.ಹೂಲಗೇರಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಹೂಲಗೇರಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಮರೆತಿದ್ದಾರೆ. 2023ರ ಚುನಾವಣೆಯಲ್ಲಿ ಮತದಾರರು ಇಳಕಲ್‌ನ ನಾಟಕ ಕಂಪನಿಗಳಿಗೆ ಮಾರು ಹೋಗುವದಿಲ್ಲ. ಅವರ ಉದ್ಯಮ ಮನಸ್ಥಿತಿಯ ಡ್ರಾಮಾ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಿದರು.

    ಕ್ಷೇತ್ರದ ಪರಿಚಯವೇ ಇಲ್ಲದ ಇಳಕಲ್ ಮೂಲದ ಡಿ.ಎಸ್.ಹೂಲಗೇರಿ ಹಾಗೂ ಜೆಡಿಎಸ್‌ನ ಸಿದ್ದು ಬಂಡಿ ಬಣ್ಣದ ಮಾತುಗಳನ್ನಾಡಿ ಮತ ಹಾಕಿಸಿಕೊಂಡು ತಮ್ಮ ಉದ್ಯೋಗ ಬಲಪಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಬಾರಿ ಮತದಾರರು ಜಾಗೃತರಾಗಿದ್ದು ಅವರ ನಾಟಕ ನಡೆಯುವುದಿಲ್ಲ ಎಂದು ವಜ್ಜಲ್ ಟೀಕಿಸಿದರು.

    ಪುರಸಭೆ ಜೆಡಿಎಸ್ ಸದಸ್ಯರಾದ ಗುಂಡಪ್ಪ ಗಂಗಾವತಿ, ಬಾಬು ಉಪ್ಪಾರ ಹಾಗೂ ಪ್ರಮುಖರಾದ ಕರಿಯಪ್ಪ ಯಾದವ್, ನಾಗರಾಜ ತಳವಾರ, ಮೇಗಳಪೇಟೆ, ಕಿಲ್ಲಾದಲ್ಲಿನ ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಪ್ರಮುಖರಾದ ಮುದಕಪ್ಪ ವಕೀಲ ನೀರಲಕೇರಾ, ಬೀರಪ್ಪ ನೀಲೊಗಲ್, ಗೋವಿಂದ ನಾಯಕ, ಪರಮೇಶ ಯಾದವ, ಶಂಕರಗೌಡ ಬಳಗಾನೂರು, ಉದಯಕುಮಾರ ಕಮ್ಮಾರ, ಗಿರಿಮಲ್ಲನಗೌಡ, ಶರಣಪ್ಪ ಜಾಧವ್, ಗ್ಯಾನಪ್ಪ ಹೊಳ್ಯಾಚಿ, ಮಂಜುನಾಥ ನಂದವಾಡಿಗೆ, ನಾಗಪ್ಪ ವಜ್ಜಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts