More

    ಎಂಆರ್‌ಪಿಎಲ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ

    ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆಗಳು ನೀಡುವ ಕೊಡುಗೆ ಶಾಲಾ ವಿದ್ಯಾರ್ಥಿಗಳ ಸವಾರ್ಂಗೀಣ ಪ್ರಗತಿಗೆ ಪೂರಕವಾಗಿದ್ದು, ಇಂತಹ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶೋಭಾ ರಾಜೇಶ್ ಹೇಳಿದರು.

    ಸುರತ್ಕಲ್ ಸರ್ಕಾರಿ ಶಾಲೆಯಲ್ಲಿ ಎಂಆರ್‌ಪಿಎಲ್‌ನ ಸಿಎಸ್‌ಆರ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮೂರು ತರಗತಿ ಕೊಠಡಿಗಳು ಹಾಗೂ ಬಾಲಕ ಬಾಲಕಿಯರ ಶೌಚಾಲಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ಹಿರಿಯ ವಿದ್ಯಾರ್ಥಿ ಪ್ರಶಾಂತ್ ಶಾಲಾ ಧ್ವಜಕಟ್ಟೆಯನ್ನು ನವೀಕರಿಸಿದ್ದು, ಅದನ್ನು ಅವರ ಮಾತೃಶ್ರೀ ಉದ್ಘಾಟಿಸಿದರು.

    ಎಂಆರ್‌ಪಿಎಲ್ ಅಧಿಕಾರಿಗಳಾದ ಲಲಿತಾ ಪಾಂಡೆ, ಸೀನಿಯರ್ ಮ್ಯಾನೇಜರ್ ಲಕ್ಷ್ಮೀ ಕೆ, ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕುಮಾರ್, ಎಸ್‌ಡಿಎಂಸಿ ಗೌರವ ಸಲಹೆಗಾರ ವೆಂಕಟ್ರಮಣ ಮಯ್ಯ, ಉದ್ಯಮಿ ಎಸ್ ರಾಮಚಂದ್ರ ಕಾಮತ್, ಸಾಮಾಜಿಕ ಮುಂದಾಳುಗಲಾದ ಸುಕುಮಾರ ಸಾಲಿಯಾನ್, ಹರೀಶ್ ಶೆಟ್ಟಿಗಾರ್, ಲಯನ್ಸ್ ಕ್ಲಬ್ ಸುರತ್ಕಲ್ ಅಧ್ಯಕ್ಷ ಜಯಂತ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಕುಳಾಯಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಸಾವಿತ್ರಿ ರಮೇಶ್ ಭಟ್ ಸೇರಿದಂತೆ ಹಲವರು ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಚೇತನ್ ಎಂ.ಎಂ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts