More

    ಸೆಲ್ಫಿ ತೆಗೆಯಲು ಹೋಗಿ ನದಿ ಪ್ರವಾಹದಲ್ಲಿ ಸಿಲುಕಿದ ಪಿಯು ವಿದ್ಯಾರ್ಥಿನಿಯರು

    ಭೋಪಾಲ್​: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪೆಂಚ್​ ನದಿ ಪ್ರವಾಹದಲ್ಲಿ ಸಿಲುಕ್ಕಿದ್ದ ಇಬ್ಬರು ಹುಡುಗಿಯರನ್ನು ಸ್ಥಳೀಯ ಪೊಲೀಸರು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ಛಿಂದ್ವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಿಂದ 273 ಕಿ.ಮೀ ದೂರದಲ್ಲಿದೆ.

    ಇದನ್ನೂ ಓದಿ: ಮಾಸ್ಕ್​ನಿಂದ ಮಾಡಿದ ಜಿ-ಸ್ಟ್ರಿಂಗ್​ ಧರಿಸಿ ವ್ಯಕ್ತಿಯ ಬೆತ್ತಲೆ ಓಡಾಟ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಪೊಲೀಸ್​ ಮೂಲಗಳ ಪ್ರಕಾರ ಛಿಂದ್ವಾರದಿಂದ 50 ಕಿ.ಮೀ ದೂರದಲ್ಲಿರುವ ಜುನ್ನಾರ್ಡಿಯೋ ಪಟ್ಟಣದಿಂದ ಆರು ಹುಡುಗಿಯರು ಪಿಕ್​ನಿಕ್​ಗಾಗಿ ಬೆಲ್ಖೇದಿ ಗ್ರಾಮದಲ್ಲಿರುವ ಪೆಂಚ್​ ನದಿಗೆ ಗುರುವಾರ ಬಂದಿದ್ದರು.

    ಈ ವೇಳೆ ಪಿಯು ವಿದ್ಯಾರ್ಥಿನಿಯರಾದ ಮೇಘ ಜಾವ್ರೆ ಮತ್ತು ವಂದನಾ ತ್ರಿಪಾಠಿ ಮತ್ತಷ್ಟು ಖಷಿಗಾಗಿ ನದಿ ಮಧ್ಯಕ್ಕೆ ತೆರಳಿದ್ದಾರೆ. ಅಲ್ಲದೆ, ಅಲ್ಲಿಯೇ ಇದ್ದ ಬಂಡೆಗಳ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ.

    ಇದ್ದಕ್ಕಿದ್ದಂತೆ ನೀರಿನ ಮಟ್ಟ ನದಿಯಲ್ಲಿ ಹೆಚ್ಚುತ್ತಿರುವುದನ್ನು ಕಂಡು ಹುಡುಗಿಯರು ಕಿರುಚಾಡಿದ್ದಾರೆ. ಇದನ್ನು ಕಂಡು ಉಳಿದವರು ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ 12 ಪೊಲೀಸರ ತಂಡವೊಂದು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಿಂದ ಹುಡುಗಿಯರನ್ನು ರಕ್ಷಿಸಿದ್ದಾರೆ.

    ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ನೀರು ಕುಡಿದ ಮೃತ ಶಿಕ್ಷಕ?

    ನದಿಯಲ್ಲಿ ಹೆಚ್ಚಿದ ನೀರಿನಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಹುಡುಗಿಯರು ನದಿಯಲ್ಲಿ ಸಿಲುಕಿದ್ದರು. ಮೊದಲೇ ಗಾಬರಿಯಾಗಿದ್ದ ಅವರು ನಂತರದಲ್ಲಿ ಮಾತನಾಡಲು ಕೂಡ ಭಯಪಡುತ್ತಿದ್ದರು ಎಂದು ಪೊಲೀಸ್​ ಉಪವಲಯಾಧಿಕಾರಿ ಎಸ್​.ಕೆ. ಸಿಂಗ್​ ಹೇಳಿದ್ದಾರೆ. (ಏಜೆನ್ಸೀಸ್​)

    ಮಾತಿನಲ್ಲಿಯೇ ಪಾಲಿಕೆ ಅಧಿಕಾರಿಗಳ ಬೆವರಿಳಿಸಿದ ಬೀದಿಬದಿ ವ್ಯಾಪಾರಿ; ಅಸಡ್ಡೆ ಬೇಡ ಈಕೆ ಪಿಎಚ್​ಡಿ ಪದವೀಧರೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts