More

    VIDEO| ಎಸ್​ಡಿಪಿಐ, ಕೆಎಫ್​ಡಿ ಹಾಗೂ ಪಿಎಫ್​ಐ ಸಂಘಟನೆಗಳನ್ನು ನಿಷೇಧಿಸುವಂತೆ ಸಂದ ತೇಜಸ್ವಿ ಸೂರ್ಯ ಒತ್ತಾಯ

    ಬೆಂಗಳೂರು: ಎಸ್​ಡಿಪಿಐ, ಕೆಎಫ್​ಡಿ ಹಾಗೂ ಪಿಎಫ್​ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

    ತಮ್ಮ ಹತ್ಯೆಗೆ ಸಂಚು ರೂಪಿಸಿದ ವಿಷಯ ತಿಳಿಯುತ್ತಿದ್ದಂತೆ ಅವರು ಈ ಸಂಘಟನೆಗಳು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದರಿಂದ ಅವುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

    ಈ ಮೂರು ಸಂಘಟನೆಗಳ ವಿರುದ್ಧ 1,500 ಕೇಸುಗಳು ಇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಕೇಸ್​ಗಳನ್ನು ಹಿಂದಕ್ಕೆ ಪಡೆದರು. ಹೀಗಾಗಿ ಈ ಸಂಘಟನೆಗಳು ಮತ್ತೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿವೆ ಎಂದು ಆರೋಪಿಸಿದರು.

    ಈ ಸಂಘಟನೆಗಳಿಗೆ ನೆರೆ ರಾಷ್ಟ್ರಗಳಾದ ಬಾಂಗ್ಲಾ ಹಾಗೂ ಪಾಕಿಸ್ತಾನದಿಂದ ಹಣ ಹರಿದು ಬರುತ್ತಿದೆ. ಕೆಎಫ್​ಡಿ ಸಂಘಟನೆ ಸದ್ಯ ಅಸ್ತಿತ್ವದಲ್ಲಿ ಇಲ್ಲ. ಆ ಸಂಘಟನೆ ಪಿಎಫ್​ಐನೊಂದಿಗೆ ವಿಲೀನಗೊಂಡಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts