More

    ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ

    ಚಾಮರಾಜನಗರ: ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಎಲ್ಲೆಡೆ ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಿದೆ.
    ಕೃಷಿ ಇಲಾಖೆಯ ಮಾಹಿತಿ ಪ್ರಕಾರ ವಾಡಿಕೆ ಪ್ರಕಾರ ಸೆ.11ರ ವರೆಗೆ 428.8 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 623.4 ಮಿ.ಮೀ ಮಳೆಯಾಗಿದ್ದು, 194.6 ಮಿ.ಮೀ. ಹೆಚ್ಚುವರಿ ಮಳೆಯಾಗಿದೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಅಧಿಕವಾಗಿ ಮಳೆ ಸುರಿದಿದ್ದು, ಚಾಮರಾಜನಗರ ತಾಲೂಕಿನಲ್ಲಿ 601.5 ಮಿ.ಮೀ (ವಾಡಿಕೆ ಮಳೆ 414.8 ಮಿ.ಮೀ), ಗುಂಡ್ಲುಪೇಟೆಯಲ್ಲಿ 613(ವಾ.415)ಮಿ.ಮೀ., ಕೊಳ್ಳೇಗಾಲದಲ್ಲಿ 679.6 (ವಾ.455.2)ಮಿ.ಮೀ., ಹನೂರಿನಲ್ಲಿ 621.9 (ವಾ. 387.6 ) ಮಿ.ಮೀ., ಯಳಂದೂರಲ್ಲಿ 709 (ವಾ.472.0) ಮಿ.ಮೀ. ಮಳೆಯಾಗಿದೆ.

    ಅಧಿಕ ಮಳೆಯಿಂದ ಬೆಳೆಗಳಿಗೆ ತೊಂದರೆ ಉಂಟಾಗುವ ಆತಂಕ ರೈತರನ್ನು ಕಾಡುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಹಿಂಗಾರು ಬಿತ್ತನೆ ಕಾರ್ಯಕ್ಕೆ ಕೃಷಿಕರು ಭೂಮಿಯನ್ನು ಹದಗೊಳಿಸಿಕೊಳ್ಳುತ್ತಿದ್ದಾರೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ, ಬೆಳ್ಳುಳ್ಳಿ, ಬಿಳಿಜೋಳ, ದ್ವಿದಳ ದಾನ್ಯಗಳನ್ನು ಕಟಾವು ಮಾಡಿ, ಒಕ್ಕಣೆ ಮುಗಿಸಿರುವ ರೈತರು ಮತ್ತೆ ಬಿತ್ತನೆ ಮಾಡಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts