More

    PHOTOS| ಆರೋಗ್ಯಯುತ ಕೋಶಗಳಿಗೆ ದಾಳಿ ಮಾಡುವ ಕರೊನಾ ವೈರಸ್​ ಸರಣಿ ಚಿತ್ರಗಳು ಸೆರೆ!

    ಬ್ರಾಸಿಲಿಯಾ: ಮಹಾಮಾರಿ ಕರೊನಾ ವೈರಸ್​ ಆರೋಗ್ಯಯುತ ಕೋಶಗಳಿಗೆ ದಾಳಿ ಮಾಡುವ ಸರಣಿ ಚಿತ್ರವನ್ನು ಮೊದಲ ಬಾರಿಗೆ ಶಕ್ತಿಶಾಲಿ ಎಲೆಕ್ಟ್ರಾನ್​ ಸೂಕ್ಷ್ಮದರ್ಶಕ(ಮೈಕ್ರೋಸ್ಕೋಪ್​) ಸಹಾಯದಿಂದ ಬ್ರೆಜಿಲ್​ನ ಒಸ್ವಾಲ್ಡೋ ಕ್ರುಜ್​ ಫೌಂಡೇಶನ್​ ಪರಿಣಿತರು ಸೆರೆಹಿಡಿದಿದ್ದಾರೆ.

    ಕರೊನಾ ವೈರಸ್​ ಪ್ರತಿಕೃತಿಗಳು ಹಾಗೂ ಹರಡುವ ಬಗೆಯನ್ನು ಅಧ್ಯಯನ ಮಾಡುವಾಗ ಆಶ್ಚರ್ಯಚಕಿತ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಡೆಡ್ಲಿ ವೈರಸ್​ನ ಅನೇಕ ಕಣಗಳು ಸಾಮಾನ್ಯವಾಗಿ ಕೋಶಗಳನ್ನು ಪ್ರವೇಶಿಸಲು ಯತ್ನಿಸುವುದರಿಂದ ಕೋಶದೊಳಗೆ ಹೋಗುತ್ತಿರುವುದನ್ನು ಸರಣಿ ಚಿತ್ರದಲ್ಲಿ ಕಾಣಬಹುದಾಗಿದೆ.

    ಸಂಶೋಧಕರು ಸಾಧನವೊಂದನ್ನು ಬಳಸಿದ್ದು, ಅದು ವೈರಸ್​ಗಳನ್ನು ಅವುಗಳ ಸಾಮಾನ್ಯ ಗಾತ್ರಕ್ಕಿಂತ ಎರಡು ದಶಲಕ್ಷ ಪಟ್ಟು ಹೆಚ್ಚು ವರ್ಧಿಸಲು ಅನುವು ಮಾಡಿಕೊಡುತ್ತದೆ. ಬಳಿಕ ಕೋಶದೊಳಗೆ ವೈರಸ್​ಗಳು ಪ್ರವೇಶಿಸಲು ಅನುವು ಮಾಡಿಕೊಟ್ಟು ವೈರಸ್​ ಚಿತ್ರವನ್ನು ಸೆರೆಹಿಡಿಯಲಾಗಿದೆ.

    ಅಧ್ಯಯನಕ್ಕೆ ಮಾನವನ ಕೋಶಗಳನ್ನು ಬಳಸಿಕೊಳ್ಳದೇ ಆಫ್ರಿಕನ್​ ಹಸಿರು ಕೋತಿಯ ಕೋಶಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸಸ್ತನಿ ವರ್ಗದ ಹಸಿರು ಕೋತಿಯು ಆಫ್ರಿಕಾದ ಸುಡಾನ್​ ಮತ್ತು ಇಥೋಪಿಯಾದಲ್ಲಿ ಕಂಡುಬರುತ್ತವೆ. ಇವುಗಳ ಕೋಶ ರಚನೆಯನ್ನು ಆಗಾಗ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಲು ಬಳಸಲಾಗುತ್ತದೆ ಎಂದು ಕ್ರುಜ್​ ಫೌಂಡೇಶನ್​ ಪರಿಣಿತರು ವಿವರಿಸಿದ್ದಾರೆ.

    ಅಧ್ಯಯನ ಹಂತದದಲ್ಲಿ ಪ್ರಮುಖ ಮೂರು ಫೋಟೋಗಳನ್ನು ಸೆರೆಹಿಡಿಯಲಾಗಿದೆ. ಇವುಗಳಲ್ಲಿ ಕರೊನಾ ವೈರಸ್​ ಕೋಶಗಳನ್ನು ಪ್ರವೇಶಿಸಲು ತನ್ನಷ್ಟಕ್ಕೆ ತಾನೇ ಅಣಿಯಾಗುವುದನ್ನು ಕಾಣಬಹುದಾಗಿದೆ.

    ಚಿತ್ರವೊಂದರಲ್ಲಿ ಕರೊನಾ ವೈರಸ್​ನ ಅನೇಕ ಕಣಗಳು ಕೋಶಗಳ ಸೈಟೋಪ್ಲಾಸಂಗೆ ಸೋಂಕು ತಗುಲಿಸುವ ಪ್ರಯತ್ನ ಮಾಡುತ್ತಿದೆ. ಈ ಹಂತದಲ್ಲಿ ವೈರಸ್​ ತನ್ನ ಅನುವಂಶೀಯ ವಸ್ತುವನ್ನು ಕೋಶದಲ್ಲಿ ಸ್ಥಾಪಿಸುತ್ತದೆ. ಮತ್ತೊಂದು ಚಿತ್ರದಲ್ಲಿ ವೈರಲ್​ ಕಣಗಳು ಕೋಶಗಳಿಗೆ ಸೋಂಕು ತಗುಲಿಸುತ್ತದೆ. ಈ ಹಂತದಲ್ಲಿ ಮಾನವನಿಗೆ ವೈರಸ್​ ತಗುಲಿದೆ ಎಂದು ಹೇಳಬಹುದು.

    ಸೋಂಕಿತ ರೋಗಿಯ ಮೂಗು ಮತ್ತು ಗಂಟಲಿನಿಂದ ಸಂಗ್ರಹಿಸಿದ ಮಾದರಿಯಲ್ಲಿ ವೈರಸ್​ ಅನ್ನು ಪ್ರತ್ಯೇಕಿಸಿ, ಬಳಿಕ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಹಸಿರು ಕೋತಿಯ ಕೋಶಗಳ ಮೇಲೆ ಪ್ರಯೋಗಿಸಲಾಗಿದೆ. ಬಳಿಕ ಅದನ್ನು ಎಲೆಕ್ಟ್ರಾನ್​ ಮೈಕ್ರೋಸ್ಕೋಪ್​ ಸಹಾಯಾದಿಂದ ಚಿತ್ರವನ್ನು ಸೆರೆಹಿಡಿಯಲಾಗಿದೆ.

    ಚಿತ್ರದಲ್ಲಿರುವ ಕಪ್ಪು ಕಲೆಗಳೇ ಕರೊನಾ ವೈರಸ್​ ಎಂದು ಸಂಶೋಧಕರು ತಿಳಿಸಿದ್ದಾರೆ. ಅದನ್ನು ತಡೆಯುವ ಬಗೆ ಹೇಗೆ ಎಂಬುದನ್ನು ಈವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನಗಳು ನಡೆಯುತ್ತಲೇ ಇವೆ.

    ಕರೊನಾಗೆ ಈವರೆಗೂ ಔಷಧಿಯನ್ನು ಕಂಡುಹಿಡಿದಿಲ್ಲ. ಚೀನಾದ ವುಹಾನ್​ ನಗರದ ಪ್ರಾಣಿ ಮಾರುಕಟ್ಟೆಯಲ್ಲಿ ವೈರಸ್​ ಹುಟ್ಟಿಕೊಂಡಿತು ಎನ್ನಲಾಗಿದೆ. ವೈರಸ್​ ಬಾವಲಿಯಿಂದ ಮಾನವನಿಗೆ ಹರಡಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಇದು ಸಂಪೂರ್ಣ ಹೊಸ ವೈರಸ್​ ಆಗಿರುವುದರಿಂದ ಈ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ.

    ಕರೊನಾ ವೈರಸ್​ ಸೋಂಕಿನ ಕ್ಷಣಗಳ ಚಿತ್ರವನ್ನು ಫಿಯೊಕ್ರುಜ್(Fiocruz) ವೆಬ್​ಸೈಟ್​ನಲ್ಲಿ ಸಮಗ್ರವಾಗಿ ನೋಡಬಹುದಾಗಿದೆ. (ಏಜೆನ್ಸೀಸ್​)

    ಬಡವರ ಸೋಗಿನಲ್ಲಿ ಊಟ ಕಸಿಯುತ್ತಿರುವ ಸಿರಿವಂತ ಸೋಮಾರಿಗಳು: ರಾಜಸ್ಥಾನದಲ್ಲಿ 22 ಕೂಲಿ ಕಾರ್ಮಿಕರ ಸಾವು

    ಮಹಾರಾಷ್ಟ್ರದಲ್ಲಿ ಕೋವಿಡ್​ 19 ರಾಜಕೀಯ, ಅಧಿಕಾರಿಗಳೊಂದಿಗಿನ ರಾಜ್ಯಪಾಲರ ಸಭೆ ಖಂಡಿಸಿದ ಶಿವಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts