More

    ಮಂಗಳೂರಿನಲ್ಲಿ ಏ.14ಕ್ಕೆ ಮೋದಿ ಚುನಾವಣಾ ಪ್ರಚಾರ

    ಬೆಂಗಳೂರು: ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಏ.14ರ ರಾಜ್ಯ ಪ್ರವಾಸ ಬಹುತೇಕ ಖಚಿತವಾಗಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದ ಕಾರ್ಯಕ್ರಮ ದಕ್ಷಿಣಕನ್ನಡ ಕ್ಷೇತ್ರಕ್ಕೆ ಸ್ಥಳಾಂತರವಾಗಿದೆ.

    ಕೇಸರಿ ಪಡೆಯ ಭದ್ರಕೋಟೆ ಎಂದು ಕರೆಯಲಾಗುವ ಮಂಗಳೂರಿನಲ್ಲಿ ಅಂದು ಮಧ್ಯಾಹ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ಕೈಬಿಟ್ಟು, ಕ್ಯಾಪ್ಟನ್ ಬೃಜೇಶ್ ಚೌಟರನ್ನು ಕಣಕ್ಕಿಳಿಸಿದ ಬಳಿಕ ಜನರ ನಾಡಿಮಿಡಿತ ಹೇಗಿದೆ ಎಂದು ತಿಳಿದುಕೊಳ್ಳಲಿದ್ದಾರೆ.

    ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಬದಲಾಗಿದ್ದಾರೆ. ಉತ್ತರಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೂ ಕೊಕ್ ನೀಡಲಾಗಿದೆ.

    ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಮೇಜರ್ ಸರ್ಜರಿ ನಂತರ ಉತ್ತರಕನ್ನಡ ಹೊರತುಪಡಿಸಿ ಉಳಿದ ಎರಡು ಕ್ಷೇತ್ರಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಉತ್ಸಾಹದಲ್ಲಿ ಕೊರತೆಯಾಗಿಲ್ಲ.

    ಮೂರು ಕ್ಷೇತ್ರಗಳ ಮೇಲೆ ಮೋದಿ ಕಾರ್ಯಕ್ರಮ ಪ್ರಭಾವಬೀರಲಿದೆ. ಕಾರ್ಯಕರ್ತರಲ್ಲೂ ಉಮೇದಿ ಹೆಚ್ಚಿಸಲಿದೆ ಎಂಬ ಮಾಹಿತಿ ಆಧರಿಸಿ ಮಂಗಳೂರಿಗೆ ನಿಗದಿಪಡಿಸಲಾಗಿದೆ.

    ಪ್ರಧಾನಿ ಕಚೇರಿ ತಂಡವೊಂದರ ಅಭಿಪ್ರಾಯದಂತೆ ಏ.14ರ ಕಾರ್ಯಕ್ರಮ ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಶಿಫ್ಟ್ ಮಾಡಿ ಸಾರ್ವಜನಿಕ ಸಭೆ ಆಯೋಜಿಸಲಾಗುತ್ತಿದೆ.

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅದೇ ದಿನ ಸಂಜೆ ರೋಡ್ ಶೋ ನಡೆಯಲಿದೆ. ಹೆಬ್ಬಾಳ, ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರಗಳು ಒಳಗೊಳ್ಳುವ ರೂಪರೇಷೆ ಸಿದ್ಧವಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts