More

    ಮೋದಿ ನೇತೃತ್ವ ದೇಶ ಪ್ರಗತಿ ಪಥದತ್ತ – ದೇವೇಂದ್ರ ಫಡ್ನವಿಸ್

    ವಿಜಯಪುರ: ‘ನಾನು ತಿನ್ನಲ್ಲ, ತಿನ್ನೋಕೆ ಬಿಡಲ್ಲ’ ಎಂದು ಅಧಿಕಾರಕ್ಕೆ ಬಂದ ದಿನವೇ ವಾಗ್ದಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದೆ ಎಂದು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದರು.

    ನಗರದ ಡೋಬಳೆ ಗಲ್ಲಿಯಲ್ಲಿ ಮಂಗಳವಾರ ಸಂಜೆ ಬಿಜೆಪಿಯಿಂದ ಹಮ್ಮಿಕೊಂಡಿದ್ದ ‘ಚಹಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಕೋಟಿ ಕೋಟಿ ಜನರ ಮನೆಗೆ ಗ್ಯಾಸ್, ನೀರು, ಶೌಚಗೃಹ ಕೊಟ್ಟಿದ್ದಾರೆ. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 10 ಸಾವಿರ ರೂಪಾಯಿ ನೀಡಲಾಗುತ್ತಿದೆ. ಭಾರತದ ಆರ್ಥಿಕ ವ್ಯವಸ್ಥೆ ಸುಧಾರಿಸಿದೆ ಎಂದರು.

    15 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಬಜೆಟ್ ಗಾತ್ರ ಇದೀಗ 45 ಲಕ್ಷ ಕೋಟಿಗೆ ತಲುಪಿದೆ. ಮೋದಿ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳು, ಯುವಕ-ಯುವತಿಯರು, ರೈತರು ಸೇರಿದಂತೆ ಎಲ್ಲರ ಬದುಕನ್ನು ವಿಕಾಸಗೊಳಿಸುತ್ತಿದ್ದಾರೆ. ಬಡತನವನ್ನು ಹೋಗಲಾಡಿಸುತ್ತಿದ್ದಾರೆ ಎಂದರು.

    ಕರೋನಾ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರ ತಲುಪಿಸಿದ್ದಾರೆ. ಒಂದೂವರೆ ವರ್ಷ ಕೋವಿಡ್ ಸಮಯದಲ್ಲಿ ಭಾರತದ ಸಮಸ್ತ ಜನತೆಗೆ ವ್ಯಾಕ್ಸಿನ್ ಕೊಟ್ಟಿದ್ದಾರೆ. ಕೇವಲ ಐದು ದೇಶಗಳು ಕೋವಿಡ್ ಔಷಧ ತಯಾರು ಮಾಡುತ್ತಿದ್ದವು, ಅದರಲ್ಲಿ ಭಾರತವೂ ಇದೆ. 20 ಲಕ್ಷ ಕೋಟಿ ರೂಪಾಯಿಗಳನ್ನು ಕೋವಿಡ್‌ಗಾಗಿ ಮೋದಿ ಖರ್ಚುಮಾಡಿ ಜನತೆಯನ್ನು ಸುರಕ್ಷತೆಯಾಗಿ ಇಟ್ಟಿದ್ದಾರೆ ಎಂದರು.

    ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕರ್ನಾಟಕದಲ್ಲಿ ಸೋತವರನ್ನು ಡಿಸಿಎಂ ಮಾಡಿದ್ದೆವು. ಎಲ್ಲಾ ಇಲಾಖೆ ಮಂತ್ರಿ ಆದವರು ಎಲ್ಲಾ ನೈತಿಕತೆ ಬಿಟ್ಟು ರಂಜಾನ್‌ನಲ್ಲಿ ಹೋಗಿ ನಮಾಜ್ ಮಾಡಿಬಿಟ್ಟರು. ಫಡ್ನವಿಸ್ ಅವರು ಅಜಾತ ಶತ್ರು, ಪಕ್ಷದ ಶಿಸ್ತಿನ ಸಿಪಾಯಿ ಎಂದರು.

    ಛತ್ರಪತಿ ಶಿವಾಜಿ ಮಹಾರಾಜರು ಬಾಲ್ಯದಲ್ಲಿ ವಿಜಯಪುರದಲ್ಲಿದ್ದಾಗ ಗೋ ಹತ್ಯೆಯನ್ನು ತಡೆದು ಕೈ ಕತ್ತರಿಸಿದ ಇತಿಹಾಸ ಇದೆ. ಕಳೆದ ವರ್ಷ ವಿಜಯಪುರದಲ್ಲಿ 17 ಅಡಿ ಎತ್ತರದ ಮಹಾರಾಣ ಪ್ರತಾಪ ಸಿಂಹ ಮೂರ್ತಿ ನಿರ್ಮಿಸಿದ್ದೇವೆ. ವೀರ ಸಾವರ್ಕರ್ ಪ್ರತಿಮೆ ಮಾಡಿದ್ದೇವೆ. ದೇಶಾಭಿಮಾನ ಬೆಳೆಸುತ್ತಿದ್ದೇವೆ ಎಂದರು.

    ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ರಾಹುಲ್ ಜಾಧವ, ವಿವಿಧ ಮುಖಂಡರುಗಳು ಇದ್ದರು.

    ಮರಾಠಿಯಲ್ಲಿ ಭಾಷಣ: ಮರಾಠಿಯಲ್ಲಿಯೇ ಭಾಷಣ ಆರಂಭಿಸಿದ ಪಡ್ನವಿಸ್, ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಕಾರಣ ಚಾಯ್ ಪೆ ಚರ್ಚಾ ಹೋಗಿ ಭೋಜನ್ ಪೆ ಚರ್ಚಾ ಆಗಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಗಜಾನನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts