More

    ಆತ್ಮಹತ್ಯೆಗೆ ಯೋಚಿಸಿದಾತ ಈಗ ಮಾದರಿ ಕೃಷಿಕ

    ನ್ಯಾಮತಿ (ದಾವಣಗೆರೆ ಜಿಲ್ಲೆ): ಆಧುನಿಕತೆ ಜತೆ ಜತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳುತ್ತ ಸಾಧನೆಗೈದವರು ಅನೇಕರು. ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ರೈತ ಬಿ.ಎಚ್.ಉಮೇಶ ಇವರಲ್ಲೊಬ್ಬರು.

    ಸಾವಯವ ಕೃಷಿ ಪದ್ಧತಿ ಜತೆಗೆ ಸಮಗ್ರ ಕೃಷಿಯಲ್ಲಿ ತೊಡಗಿರುವ ಇವರು ಕೃಷಿ ಪಂಡಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅರಣ್ಯ ಬೆಳೆಸುವ, ಸಂರಕ್ಷಣೆ, ಅಂತರ್ಜಲ ವೃದ್ಧಿ ಹೀಗೆ ವಿವಿಧ ಕೃಷಿಪೂರಕ ಚಟುವಟಿಕೆಗಳಲ್ಲೂ ನಿರತರಾಗಿದ್ದಾರೆ.

    ಸುಮಾರು 15 ವರ್ಷಗಳ ಹಿಂದೆ 9 ಲಕ್ಷ ರೂ. ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಯೋಚಿಸಿದ್ದ ಉಮೇಶ್, ಇಂದು ಸ್ವಾವಲಂಬಿಯಾಗಿ ಉಳಿದ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

    ರಾಸಾಯನಿಕ ಗೊಬ್ಬರಗಳ ಕಪಿಮುಷ್ಠಿಯಿಂದ ಹೊರಬಂದು, ತಮಗೆ ಬೇಕಾದ ಹಣ್ಣು-ತರಕಾರಿ ಬೆಳೆಯಲು ಆರಂಭಿಸಿದರು. ಅರ್ಧ ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಭತ್ತ ಮತ್ತು ಅರಿಷಿಣ ಬೆಳೆಯುತ್ತಾರೆ. ಭತ್ತವನ್ನು ಅಕ್ಕಿ ಮಾಡಿಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ಅರಿಷಿಣ ಪುಡಿ ಮಾಡಿಸಿ ಗ್ರಾಮದಲ್ಲಿಯೇ ಮಾರುತ್ತಾರೆ.

    ಸಾವಯವ ಗೊಬ್ಬರ ಘಟಕ:
    ಎರಡು ಜಾನುವಾರು, 10 ಮೊಲ, 15 ಪಾರಿವಾಳ, 1 ಕುರಿಮರಿ ಸಾಕಿ ಪಶುಪಕ್ಷಿ ಪ್ರೇಮಿಯೂ ಆಗಿರುವ ಉಮೇಶ್, ಜಮೀನಿಗೆ ಬೇಕಾದ ಸಾವಯವ ಗೊಬ್ಬರ ತಯಾರಿಸಿಕೊಳ್ಳುತ್ತಾರೆ. ರೈತರು ಪ್ರತಿ ವರ್ಷ ಕನಿಷ್ಠ 8 ರಿಂದ 10 ಗಿಡಗಳನ್ನಾದರೂ ಜಮೀನಿನಲ್ಲಿ ನೆಟ್ಟು ಬೆಳೆಸಬೇಕು ಎನ್ನುವ ಇವರು, ಸ್ವತಃ ತಾವೂ ಇದನ್ನು ಅನುಸರಿಸಿ ಪ್ರೇರಣೆಯಾಗಿದ್ದಾರೆ.

    ವಿವಿಧ ಬೆಳೆ:
    ತಮಗಿರುವ ಐದು ಎಕರೆ ಜಮೀನಿನಲ್ಲಿ ಇವರು ಅಡಕೆ, ತೆಂಗು ಬೆಳೆದಿದ್ದಾರೆ. ಇದರಲ್ಲಿ ಮಿಶ್ರ ಬೆಳೆಯಾಗಿ ಬೀನ್ಸ್, ಚೆಂಡು ಹೂವು, ನುಗ್ಗೇಕಾಯಿ ಹೀಗೆ ಬೆಳೆಗಳ ಪಟ್ಟಿ ಸಾಗುತ್ತದೆ. ನಿಯಮಿತ ಆದಾಯ ನೀಡುವ ಸಪೋಟ, ನಿಂಬೆ, ತೊಗರಿ ಬೆಳೆದಿದ್ದಾರೆ. ಉಪ ಕಸುಬಾಗಿ ಹೈನುಗಾರಿಕೆ ಅಳವಡಿಸಿಕೊಂಡಿದ್ದಾರೆ. ಬದುಗಳಲ್ಲಿ ನೆಟ್ಟ ಹಣ್ಣಿನ ಮರಗಳನ್ನು ಪಕ್ಷಿ ಸಂಕುಲಕ್ಕೆ ಮೀಸಲಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts