More

    ಮೊಬೈಲ್​​ ಚಾರ್ಜರ್​ ಕಪ್ಪು, ಬಿಳಿ ಬಣ್ಣ ಇರುವ ಹಿಂದಿನ ಕಾರಣವೇನು ಗೊತ್ತಾ?

    ನವದೆಹಲಿ: ಕೆಲವೊಮ್ಮೆ ನಾವು ನಮ್ಮ ಸುತ್ತಮುತ್ತ ಇರುವ ವಿಚಿತ್ರ ಸಂಗತಿಗಳ ಕುರಿತಾಗಿ ತಿಳಿದುಕೊಳ್ಳಲು ಪ್ರಯತ್ನಿಸಿರುವುದಿಲ್ಲ. ಹೀಗೆ ಮೊಬೈಲ್ ಚಾರ್ಜರ್​​ಗಳು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ನಮಗೆ ಗೊತ್ತಿರುವ ವಿಚಾರ. ಆದರೆ ಇದರ ಹಿಂದೆ  ಬಲವಾದ ಕಾರಣವಿದೆ.

    ಮೊಬೈಲ್ ಕಂಪನಿಗಳು ಕೆಂಪು, ಹಳದಿ, ನೀಲಿ ಅಥವಾ ಇತರೆ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ತಯಾರಿಸದಿರಲು ಕಾರಣ ಬಾಳಿಕೆ ಮತ್ತು ವೆಚ್ಚ ಎನ್ನಲಾಗಿದೆ. ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಇತರ ಬಣ್ಣಗಳಿಗೆ ಹೋಲಿಸಿದರೆ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಚಾರ್ಜರ್‌ಗಳನ್ನು ತಯಾರಿಸಲು ಕಂಪನಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ ಎನ್ನಲಾಗಿದೆ.

    ಇದನ್ನೂ ಓದಿ:  7.9ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!

    ಕಪ್ಪು ಬಣ್ಣದ ಚಾರ್ಜರ್​ ವಿಶೇಷತೆ: ಕಪ್ಪು ವಸ್ತುವು ಇತರ ಬಣ್ಣಗಳಿಗಿಂತ ಅಗ್ಗವಾಗಿದೆ. ಇದು ಚಾರ್ಜರ್ ತಯಾರಿಕೆಯ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ. ಕಪ್ಪು ಬಣ್ಣವು ಇತರ ಬಣ್ಣಗಳಿಗಿಂತ ಚೆನ್ನಾಗಿ ಶಾಖವನ್ನು ಹೀರಿಕೊಳ್ಳುತ್ತದೆ. ಕಪ್ಪು ಬಣ್ಣಕ್ಕೆ ಈ ವಿಶೇಷವಾದ ಶಕ್ತಿಯಿದೆ. ಚಾರ್ಜಿಂಗ್ ಸಮಯದಲ್ಲಿ ಉಂಟಾಗುವ ಶಾಖದಿಂದ ಚಾರ್ಜರ್ ಅನ್ನು ರಕ್ಷಿಸುತ್ತದೆ. ಕಪ್ಪು ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್‌ಗೆ ಪ್ರವೇಶಿಸದಂತೆ ತಡೆ ಹಿಡಿಯುತ್ತದೆ.

    ಇದನ್ನೂ ಓದಿ: ವೆಡ್ಡಿಂಗ್ ಆ್ಯನಿವರ್ಸರಿ ಮರೆತ ಪತಿಗೆ ಗೂಸಾ ಕೊಟ್ಟ ಮಹಿಳೆ ವಿರುದ್ಧ ದೂರು ದಾಖಲು!

    ಬಿಳಿ ಬಣ್ಣದ ಚಾರ್ಜರ್​​ ವಿಶೇಷತೆ: ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಪ್ರವೇಶಿಸದಂತೆ ತಡೆಹಿಡಿಯುತ್ತದೆ. ಎಲ್ಲರಿಗೂ ತಿಳಿದಿರುವಂತೆ ಬಿಳಿ ಬಣ್ಣ ಹೆಚ್ಚು ಶಾಖದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಡಿಮೆ ಶಾಖ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಚಾರ್ಜರ್ ಕಡಿಮೆ ಬಿಸಿಯಾಗುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ.

    ಮೊಬೈಲ್​​ ಕಂಪನಿಗಳು ಬಿಳಿ ಮತ್ತು ಕಪ್ಪು ಬಣ್ಣದ ಚಾರ್ಜರ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿವೆ. ತಯಾರಿಸಲು ಕಂಪನಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ ಹಾಗೂ ಬಳಕೆಗೂ ಸೂಕ್ತ ಎನ್ನಲಾಗಿದೆ.

    ಆಸ್ತಿಗಾಗಿ ಗಲಾಟೆ: ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts