More

    ಮನಸ್ತಾಪ ಬದಿಗೊತ್ತಿ ಒಟ್ಟಾಗಿ ಪ್ರಯತ್ನಿಸಿದರೆ ಸಮುದಾಯಗಳ ಸಮಗ್ರ ಅಭಿವೃದ್ಧಿ ಸಾಧ್ಯ

    ಚಿಕ್ಕಮಗಳೂರು: ಮನಸ್ತಾಪ ಬದಿಗೊತ್ತಿ ಒಟ್ಟಾಗಿ ಪ್ರಯತ್ನಿಸಿದರೆ ಸಮುದಾಯಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅಭಿಪ್ರಾಯಪಟ್ಟರು.

    ಇಲ್ಲಿನ ಜ್ಯೋತಿನಗರದ ಕನಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕನಕಶ್ರೀ ಮಹಿಳಾ ಸಮಾಜದ 7ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

    ಕುರುಬ ಸಮಾಜದವರು ಎಂದು ಹೇಳಿಕೊಳ್ಳಲು ಕೀಳರಿಮೆ ಬೇಡ. ಸಮಾಜದಲ್ಲಿ ಹುಟ್ಟಿರುವುದರಿಂದ ಜನ್ಮಸಾರ್ಥಕವಾಗಿದೆ ಎಂಬ ಭಾವನೆ ಇರಬೇಕು. ಸಮಾಜದವರು ಸಂಕುಚಿತ ಮನೋಭಾವ ದೂರವಿಟ್ಟು ಪರಸ್ಪರ ಸಹಕಾರದಿಂದ ನಮ್ಮ ಸಮುದಾಯದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

    ಯುವಕ, ಯುವತಿಯರು ಸಮುದಾಯದ ಏಳಿಗೆಗೆ ಸಹಕರಿಸಬೇಕು. ಅಲ್ಪ ಸೌಲಭ್ಯದಲ್ಲೇ ಉತ್ತಮ ಸಾಧನೆ ಮಾಡಿ ಮಾದರಿಯಾದ ಹಲವರು ಸಮುದಾಯದಲ್ಲಿದ್ದಾರೆ. ಶೈಕ್ಷಣಿವಾಗಿ ಜಾಗೃತಿಗೊಂಡರೆ ಮಹಿಳೆಯರು ಕೂಡ ಸಮಾಜದಲ್ಲಿ ಯಶಸ್ಸು ಪಡೆಯಬಹುದು ಎಂದು ತಿಳಿಸಿದರು.

    ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಎಲ್ಲ ಹೆಣ್ಣು ಮಕ್ಕಳು ಮನೆ ಮತ್ತು ಸಂಸಾರಕ್ಕಾಗಿ ಸಾಕಷ್ಟು ತ್ಯಾಗ ಮಾಡುತ್ತಾರೆ. ಸ್ವಲ್ಪ ಪ್ರಯತ್ನಪಟ್ಟರೆ ಸಮಾಜದ ಸಂಘಟನೆಯನ್ನೂ ಮಾಡಬಹುದು. ಸಂಸಾರದಲ್ಲಿ ಸಮಸ್ಯೆ ಇರುತ್ತದೆ. ಸಂಸಾರವೇ ಒಂದು ಸಮಸ್ಯೆ ಆಗದಂತೆ ನೋಡಿಕೊಳ್ಳುವ ಮಹಿಳೆಗೆ ತನ್ನದೇ ಆದ ಆಕಾಂಕ್ಷೆಗಳಿರುತ್ತದೆ ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದರು.

    ಮುಂದುವರಿದ ಸಮಾಜಗಳನ್ನು ಮಾದರಿಯಾಗಿಟ್ಟುಕೊಂಡರೆ ಮತ್ತಷ್ಟು ಯಶಸ್ಸು ಪಡೆಯಲು ಸಾಧ್ಯ. ವಾರ್ಷಿಕ ಯೋಜನೆ ತಯಾರಿಸಿಕೊಂಡು ಗುರಿಮುಟ್ಟಲು ಸಾಧ್ಯ. ಆರ್ಥಿಕ ಪ್ರಗತಿಗೆ ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳು ಮುಂದಾಗಬೇಕು. ಸ್ವಾವಲಂಬಿ ಜೀವನಕ್ಕಾಗಿ ವಿವಿಧ ತರಬೇತಿ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.

    ರಾಜ್ಯ ಕುರುಬರ ಸಂಘದ ನಿರ್ದೇಶಕ, ವಕೀಲ ಡಿ.ಸಿ.ಪುಟ್ಟೇಗೌಡ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಮನೆಯಲ್ಲೇ ಕೂಡಿಡುವ ಭಾವನೆ ಬದಲಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಸಂಘಟನೆ ವಿಸ್ತರಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸ ಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts