More

    ಪ್ರತಿ ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ನಿರ್ಮಾಣ

    ಎನ್.ಆರ್.ಪುರ: ತುರ್ತು ಸೇವೆಯಡಿ ಬರುವ ಅಗ್ನಿಶಾಮಕ ಠಾಣೆಯನ್ನು ಸರ್ಕಾರ ಪ್ರತಿ ತಾಲೂಕಿನಲ್ಲೂ ನಿರ್ಮಿಸುತ್ತಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
    ಅವರು ಭಾನುವಾರ ಹಿಳುವಳ್ಳಿ ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗಾಳಿ, ಬೆಂಕಿ, ನೀರಿನಿಂದ ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. ಬೆಂಕಿ ಬಿದ್ದಾಗ ತುರ್ತು ಕಾರ್ಯಾಚರಣೆ ಅಗತ್ಯ. ಪ್ರತಿ ತಾಲೂಕಿನ ಅಗ್ನಿಶಾಮಕ ದಳಕ್ಕೆ ಮೂಲ ಸೌಕರ್ಯ ಒದಗಿಸಬೇಕಿದೆ ಎಂದರು.
    ಅಗ್ನಿಶಾಮಕ ದಳದ ಸಿಬ್ಬಂದಿ ತುರ್ತು ಕಾರ್ಯಾಚರಣೆ ಸಂದರ್ಭ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಅವರಿಗೆ ವಸತಿಗೃಹ ನಿರ್ಮಾಣ ಮಾಡಿಕೊಡಬೇಕಿದೆ. ಈ ಬಗ್ಗೆ ಸರ್ಕಾರದಲ್ಲೂ ಪ್ರಸ್ತಾಪ ಮಾಡುತ್ತೇನೆ. ಶೃಂಗೇರಿ ತಾಲೂಕಿನಲ್ಲಿ ಈಗಾಗಲೇ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದ್ದು ಕೊಪ್ಪದಲ್ಲೂ ಶೀಘ್ರ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.
    ಶಿವಮೊಗ್ಗ ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ.ತಿರುಮಲೇಶ್ ಮಾತನಾಡಿ, ಎನ್.ಆರ್.ಪುರದಲ್ಲಿ ಅಗ್ನಿಶಾಮಕ ಠಾಣಾ ಕಚೇರಿ ನಿರ್ಮಿಸಲು 2 ಎಕರೆ ಜಾಗ ನೀಡಿದ್ದಾರೆ. 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಠಾಣಾ ಕಟ್ಟಡಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದರು.
    ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, ಸದಸ್ಯೆ ಯಾಸ್ಮೀನ್, ಪಪಂ ಸದಸ್ಯ ಮುನಾವರ್ ಪಾಷಾ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಅಗ್ನಿಶಾಮಕ ದಳದ ಶಿವಮೊಗ್ಗ ವಲಯದ ಅಧಿಕಾರಿ ಎಚ್.ರಾಜು, ಮೈಸೂರು ಹೌಸಿಂಗ್ ಕಾರ್ಪೋರೇಷನ್ ಕಾರ್ಯ ನಿರ್ವಹಣಾಧಿಕಾರಿ ಪದ್ಮಜಾ, ಇಂಜಿನಿಯರ್ ರವಿ, ಅಗ್ನಿಶಾಮಕ ದಳದ ಚಿಕ್ಕಮಗಳೂರು ವಲಯ ಅಧಿಕಾರಿ ಪ್ರವೀಣ್, ಎನ್.ಆರ್.ಪುರ ಅಗಿಶಾಮಕ ದಳದ ಠಾಣಾಧಿಕಾರಿ ಹೆನ್ರಿ ಡಿಸೋಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts