More

    ಕ್ರಿಕೆಟ್ ಬೆಟ್ಟಿಂಗ್‌ನಿಂದಾಗುತ್ತಿರುವ ಸಮಸ್ಯೆಗಳೇನು ಗೊತ್ತಾ?: ಸದನದಲ್ಲಿ ಮಾಹಿತಿ ಬಿಚ್ಚಿಟ್ಟ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ

    ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್‌ನಿಂದಾಗುತ್ತಿರುವ ಸಮಸ್ಯೆ ಹಾಗೂ ಪರಿಣಾಮದ ಬಗ್ಗೆ ಶಾಸಕ ರವಿಕುಮಾರ್ ಗಣಿಗ ವಿಧಾನಸಭೆ ಸದನದಲ್ಲಿ ಗಂಭೀರ ಚರ್ಚೆ ಮಾಡುವ ಮೂಲಕ ಗಮನ ಸೆಳೆದರು.
    ಕ್ರಿಕೆಟ್ ಬೆಟ್ಟಿಂಗ್ ಇಡೀ ರಾಜ್ಯದಲ್ಲಿ ಯುವಕರನ್ನು ಹಾಳು ಮಾಡುತ್ತಿದೆ. ಮಾತ್ರವಲ್ಲದೆ ರೌಡಿಸಂ ಹೆಚ್ಚು ಮಾಡುವುದರ ಜತೆಗೆ ಯುವಕರು ಸಾಲ ಮಾಡಿ ಮನೆಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನದಲ್ಲಿ ಬೆಟ್ಟಿಂಗ್ ಆಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
    ಐಪಿಎಲ್ ಬೆಟ್ಟಿಂಗ್‌ಗಾಗಿ ಯುವಕರು ಸಾಲ ಮಾಡಿಕೊಳ್ಳುತ್ತಿದ್ದಾರೆ. ಟೂರ್ನಿ ಮುಗಿದ ಬಳಿಕ ಸಾಲದ ಹಣಕ್ಕಾಗಿ ಬೈಕ್ ಮತ್ತು ಆಸ್ತಿಯನ್ನು ಬುಕ್ಕಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಬುಕ್ಕಿಗಳು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿರುತ್ತಾರೆ. ಎರಡು ತಿಂಗಳ ಹಿಂದೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬುಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಆದರೆ ಈತನ ಬಗ್ಗೆ ಯಾರೂ ಏನು ಹೇಳಿದರೂ ಗೊತ್ತಿಲ್ಲ, ನನ್ನ ಪಕ್ಷದ ಕಾರ್ಯಕರ್ತನನ್ನು ಬಿಟ್ಟು ಬಿಡುವಂತೆ ನಾಯಕರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳುತ್ತಾರೆ. ಈ ಬುಕ್ಕಿಯಿಂದ ಜಿಲ್ಲೆಯ ಎಷ್ಟೋ ಯುವಕರು ಹಾಳಾಗಿದ್ದಾರೆ ಎಂಬುದು ಗೊತ್ತಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
    ರಾಜಕಾರಣಿಗಳು ಕ್ರಿಕೆಟ್ ಬುಕ್ಕಿಗಳನ್ನು ಪೋಷಣೆ ಮಾಡುವುದನ್ನು ನಿಲ್ಲಿಸಬೇಕು. ಯುವಕರು ಆಡುತ್ತಿರುವ ಬೆಟ್ಟಿಂಗ್‌ನಿಂದ ಆತನ ಮನೆಯ ಸದಸ್ಯರು ಕಣ್ಣೀರಾಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಬುಕ್ಕಿಗಳನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts