More

    ಬೆಣ್ಣೆಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರ ಸಚಿವ ಲಾಡ್ ಭರವಸೆ

    ನವಲಗುಂದ: ಕಳೆದ 12 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ಪ್ರದೇಶವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವೀಕ್ಷಿಸಿ ಅಧಿಕಾರಿಗಳಿಂದ ಹಾನಿ ಮಾಹಿತಿ ಪಡೆದುಕೊಂಡರು.

    ತಾಲೂಕಿನ ಗುಡಿಸಾಗರ, ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ, ತಡಹಾಳ, ಕೊಂಗವಾಡ, ದಾಟನಾಳ, ತುಪ್ಪದಕುರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಹಾನಿ ಪ್ರದೇಶ ವೀಕ್ಷಿಸಿದರು.

    ನಂತರ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿಯೂ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ. ಜೂನ್​ವರೆಗೂ ಮಳೆ ಕೊರತೆ ಇತ್ತು. ಕಳೆದ 15 ದಿನಗಳಿಂದ ಮಳೆಯಿಂದ ರೈತರಿಗೆ ತೊಂದರೆ ಯಾಗಿದೆ. ಈ ಕ್ಷೇತ್ರದಲ್ಲಿ ಪರಿಶೀಲನೆ ಮಾಡುತ್ತೇನೆ. ಮುಂದೆ ಕುಂದಗೋಳ ಕ್ಷೇತ್ರಕ್ಕೆ ಹೋಗಬೇಕಿದೆ. ಮನೆ ಬಿದ್ದ ಸ್ಥಳಕ್ಕೆ ಹೋಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ವರದಿ ನೀಡುವಂತೆ ಸೂಚಿಸಿದರು.

    ಬೆಣ್ಣೆಹಳ್ಳದ ನೀರಿನ ಹರಿವು ಹೆಚ್ಚುವ ಆತಂಕದಲ್ಲಿದ್ದೇವೆ. ಮಳೆ ಹೆಚ್ಚಾದರೆ ಹರಿವು ಹೆಚ್ಚಾಗುತ್ತದೆ. ಬೆಣ್ಣೆಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಚಿಂತನೆ ನಡೆದಿದೆ ಎಂದು ಹೇಳಿದರು.

    ಪಟ್ಟಣಕ್ಕೆ ಆಗಮಿಸಿದ ಸಚಿವ ಸಂತೋಷ ಲಾಡ್​ಗೆ ಕಾಂಗ್ರೆಸ್ ಕಾರ್ಯಕರ್ತರು ಹೂಗುಚ್ಛ ನೀಡಿ ಸ್ವಾಗತಿಸಿದರು.

    ಸಚಿವರು ಶಿರಸಂಗಿ ಲಿಂಗರಾಜ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ, ಮಹದಾಯಿ ಕಳಸಾ -ಬಂಡೂರಿ ರೈತ ಹೋರಾಟ ವೇದಿಕೆಗೆ ಭೇಟಿ ನೀಡಿ, ನದಿ ಜೋಡಣೆ, ರೈತರ ಸಾಲಮನ್ನಾ, ಬೆಳೆ ವಿಮೆ, ಪರಿಹಾರ ಸೇರಿ ರೈತ ಹೋರಾಟಗಾರರ ಮನವಿ ಸ್ವೀಕರಿಸಿದರು.

    ಶಾಸಕ ಎನ್.ಎಚ್. ಕೋನರಡ್ಡಿ, ವಿನೋದ ಅಸೂಟಿ, ವಿಜಯ ಕುಲಕರ್ಣಿ, ನವೀನ ಕೋನರಡ್ಡಿ, ಚಂಬಣ್ಣ ಹಾಳದೋಟರ, ರಾಘು ಮೇಟಿ, ಸಿರಾಜ್ ಧಾರವಾಡ, ವಿಜಯಗೌಡ ಪಾಟೀಲ, ನಾರಾಯಣ ಕುರಹಟ್ಟಿ, ಮಂಜು ಮಾಯನ್ನವರ, ನವೀನ ಹೊಸಗೌಡ್ರ, ತಹಸೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts