More

    ಈಕೆ ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ: ಸಾಧನೆ ಹಿಂದಿದೆ ಕಣ್ಣೀರಿನ ಕತೆ ​

    ಲಖನೌ: ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ಬದಿಗೊತ್ತಿ, ಸುತ್ತಲಿನ ಅಡೆತಡೆಗಳನ್ನು ಮೆಟ್ಟಿನಿಲ್ಲುವ ಮೂಲಕ ಉತ್ತರ ಪ್ರದೇಶದ ಮಹಿಳೆಯರು ವಿಶೇಷ ಸಾಧನೆ ಮಾಡಿದ್ದಾರೆ. ಅದರಲ್ಲೂ ಪ್ರಿಯಾಂಕಾ ಶರ್ಮಾ ಎಂಬಾಕೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರ್ಕಾರದಿಂದ ನೇಮಕವಾದ 26 ಸರ್ಕಾರಿ ಮಹಿಳಾ ಬಸ್​ ಚಾಲಕಿಯರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಪ್ರಿಯಾಂಕಾ ಶರ್ಮಾ ಅವರು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC)ಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದು, ಉತ್ತರ ಪ್ರದೇಶದ ಮೊದಲ ಮಹಿಳಾ ಬಸ್​ ಡ್ರೈವರ್​ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

    ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ನನ್ನ ಗಂಡ ಅತಿಯಾದ ಕುಡಿತದ ಚಟದಿಂದ ಮದುವೆಯಾದ ಕೆಲವೇ ವರ್ಷದಲ್ಲಿ ಮೃತಪಟ್ಟರು. ಇಬ್ಬರು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಒಳ್ಳೆಯ ಅವಕಾಶಗಳಿಗಾಗಿ ನಾನು ದೆಹಲಿಗೆ ಸ್ಥಳಾಂತರವಾಗಿದ್ದೆ. ಆರಂಭದಲ್ಲಿ ಒಂದು ಕಾರ್ಖಾನೆಯಲ್ಲಿ ಸಹಾಯಕಳಾಗಿ ಕೆಲಸ ಗಿಟ್ಟಿಸಿಕೊಂಡಿದ್ದೆ. ಆದರೆ, ನಂತರದಲ್ಲಿ ಡ್ರೈವರ್​ ಆಗಿ ಕೆಲಸ ಪಡೆದುಕೊಂಡೆ. ಡ್ರೈವಿಂಗ್​ ಕೋರ್ಸ್​ ಮುಗಿಸಿದ ಬಳಿಕ ಮುಂಬೈಗೆ ಸ್ಥಳಾಂತರವಾದೆ. ಅಲ್ಲದೆ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಂತಹ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾ ಕೆಲಸ ಮಾಡಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

    ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಮಹಿಳೆಯರಿಗೆ ಚಾಲಕಿಯರಾಗುವ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಪ್ರಿಯಾಂಕಾ ಧನ್ಯವಾದ ತಿಳಿಸಿದ್ದಾರೆ.

    2020 ರಲ್ಲಿ ಯೋಗೀಜಿ ಮತ್ತು ಮೋದೀಜಿ ಅವರು ಮಹಿಳಾ ಚಾಲಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು. ನಾನು ಕೂಡ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದ್ದೆ. ನಾನು ಮೇ ತಿಂಗಳಲ್ಲಿ ತರಬೇತಿಯನ್ನು ಪಾಸು ಮಾಡಿ ಸೆಪ್ಟೆಂಬರ್‌ನಲ್ಲಿ ನನ್ನ ಪೋಸ್ಟಿಂಗ್ ಅನ್ನು ಪಡೆದುಕೊಂಡೆ. ನಮ್ಮ ಸಂಬಳ ಕಡಿಮೆಯಾದರೂ, ಸರ್ಕಾರದಿಂದ ನಮಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಪ್ರಿಯಾಂಕಾ ಹೇಳಿದರು. (ಏಜೆನ್ಸೀಸ್​)

    ಅಯ್ಯೋ ದುರ್ವಿಧಿಯೇ! ನ್ಯೂಸ್​ ಚಾನೆಲ್​ ನೋಡುತ್ತಿರುವಾಗಲೇ ಮಗಳ ಸಾವಿನ ಸುದ್ದಿ ನೋಡಿ ಕುಸಿದುಬಿದ್ದ ಕುಟುಂಬ

    ನಡುರಸ್ತೆಯಲ್ಲಿ ಯುವತಿಯನ್ನು ಕೊಂದು ವಿಷ ಸೇವಿಸಿದ್ದ ಸೈಕೋ ಕಿರಾತಕ ಆಸ್ಪತ್ರೆಯಲ್ಲಿ ಸಾವು!

    ಅವತಾರ್​-2 ಸಿನಿಮಾ ಎಫೆಕ್ಟ್​: ಅಪಾಯಕಾರಿ ತಿಮಿಂಗಿಲ ಶಾರ್ಕ್ ಮೇಲೆ ಸವಾರಿ ಮಾಡಿದ ಭೂಪ! ವಿಡಿಯೋ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts