More

    2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ಆರಂಭಿಸಿದ ಮೀರಾಬಾಯಿ ಚಾನು

    ನವದೆಹಲಿ: ಭಾರತದ ಸ್ಟಾರ್ ವೇಟ್‌ಲಿಫ್ಟಿಂಗ್ ಪಟು ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಮೊದಲ ದಿನವೇ ಬೆಳ್ಳಿ ಪದಕ ಜಯಿಸಿ ಮನೆ ಮಾತಾಗಿದ್ದರು. ಇದೀಗ ಮಣಿಪುರದ ವೇಟ್‌ಲ್ಟಿರ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನತ್ತ ಗಮನಹರಿಸಿದ್ದಾರೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ರಜತ ಪದಕ ಜಯಿಸಿದ ಮೀರಾಬಾಯಿ, ಇದೀಗ ಮುಂದಿನ ಒಲಿಂಪಿಕ್ಸ್‌ನಲ್ಲಿ ಶತಾಯಗತಾಯ ಸ್ವರ್ಣ ಪದಕ ಗೆಲ್ಲಲು ಪಣತೊಟ್ಟಿದ್ದಾರೆ. ಇದಕ್ಕೆ ಈಗಾಗಲೇ ಅಭ್ಯಾಸವನ್ನು ಆರಂಭಿಸಿದ್ದಾರೆ. ಅಭ್ಯಾಸ ಆರಂಭಿಸಿರುವ ಮೀರಾಬಾಯಿ, ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಹೆಣ್ಣುಮಕ್ಕಳು ಕ್ರೀಡಾಕ್ಷೇತ್ರಕ್ಕೆ ಆಗಮಿಸಲು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದ್ದಾರೆ.

    ಇದನ್ನೂ ಓದಿ: ಅಮ್ಮನ ಮಾತು ಕೇಳಿ ಬೆಂಗಳೂರಿಗೆ ಬಂದಿದ್ದಕ್ಕೇ ಪದಕ ಒಲಿಯಿತು ಎಂದ ಶೈಲಿ ಸಿಂಗ್, 

    ನನ್ನ 14ನೇ ಕ್ರೀಡಾ ಜೀವನ ಆರಂಭಿಸಿದೆ. ಈ ಹಂತದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಮೂಲಭೂತ ಸೌಕರ್ಯಗಳ ಕೊರತೆ ಇನ್ನಿಲ್ಲದಂತೆ ಕಾಡಿತು. ಆದರೆ, ಈ ಹಂತದಲ್ಲಿ ನನ್ನ ಕುಟುಂಬಸ್ಥರು ನನಗೆ ಪ್ರೋತ್ಸಾಹ ನೀಡಿ ಬೆಂಬಲಕ್ಕೆ ನಿಂತರು. ನನ್ನ ಸಾಧನೆ ಗುರುತಿಸಿ ಸರ್ಕಾರಗಳು ಕೂಡ ಬೆಂಬಲಕ್ಕೆ ನಿಂತವು. ಪ್ರತಿಯೊಬ್ಬರೂ ಹೆಣ್ಣುಮಕ್ಕಳಿಗೆ ಬೆಂಬಲ ನೀಡಬೇಕು ಎಂದು ಮೀರಾಬಾಯಿ ಹೇಳಿದ್ದಾರೆ.

    ಇದನ್ನೂ ಓದಿ: VIDEO | ಪಾಕ್ ಸ್ಪರ್ಧಿ ಜಾವೆಲಿನ್ ಬಳಸಿದ ವಿವಾದಕ್ಕೆ ನೀರಜ್ ಚೋಪ್ರಾ ಸ್ಪಷ್ಟನೆ

    ಆದರೆ, 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ಗೆ ಕೊಕ್ ನೀಡುವ ಸಾಧ್ಯತೆಗಳಿವೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ವೇಟ್‌ಲಿಫ್ಟಿಂಗ್ ಸ್ಪರ್ಧೆಯನ್ನು ತೆಗೆದುಹಾಕಿದರೆ, ಮೀರಾಬಾಯಿ ಪ್ಯಾರಿಸ್ ಒಲಿಂಪಿಕ್ಸ್ ಕನಸು ಕೂಡ ಕಮರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts