More

    ರಸ್ತೆ ಅಪಘಾತಗಳ ತಡೆಗೆ ಕ್ರಮ

    ಕೊಳ್ಳೇಗಾಲ: ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕೆಎಸ್‌ಆರ್‌ಟಿಸಿ ಕ್ರಮಗೊಂಡಿದ್ದು, ಚಾಲಕರಿಗೆ ರಸ್ತೆ ಸುರಕ್ಷತೆ ಚಾಲನೆಯ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಣಾಧಿಕಾರಿ (ಡಿಸಿ) ಅಶೋಕ್ ಕುಮಾರ್ ತಿಳಿಸಿದರು.

    ತಾಲೂಕಿನ ರಾಷ್ಟ್ರೀಯ ಹೆದ್ದಾರಿ- 209ರಲ್ಲಿ ಇತ್ತೀಚೆಗಷ್ಟೆ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿರುವ ಬಗ್ಗೆ ಪಟ್ಟಣದಲ್ಲಿ ಸೋಮವಾರ ವಿಜಯವಾಣಿಗೆ ಪ್ರತಿಕ್ರಿಯಿಸಿದ ಅವರು, ನರೀಪುರದಿಂದ ಧನಗೆರೆ ಗ್ರಾಮದವರೆಗೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಹೆದ್ದಾರಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ರಸ್ತೆ ಇಳಿಜಾರಾಗಿರುವುದು ಮತ್ತೊಂದು ಕಾರಣವಾಗಿದೆ. ಒಂದು ಕಡೆಯೂ ವೇಗ ನಿಯಂತ್ರಿಸುವ ರಸ್ತೆ ಡುಬ್ಬವಿಲ್ಲ. ಇದ್ದರಿಂದ ಚಾಲಕರಿಗೆ ರಸ್ತೆ ಸ್ಥಿತಿಗತಿ ತಿಳಿಯುವುದಿಲ್ಲ. ಇತ್ತೀಚೆಗೆ 2 ಬಾರಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಇದನ್ನು ಗಭೀರವಾಗಿ ಪರಿಗಣಿಸಿದ್ದೇವೆ. ಆದ್ದರಿಂದ ಮಳ್ಳವಳ್ಳಿ ತಾಲೂಕಿನ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರದಿಂದ ಬಸ್‌ಗಳನ್ನು ಕರೆಸಿಕೊಂಡು ಕೊಳ್ಳೇಗಾಲ ಹಾಗೂ ಚಾಮರಾಜನಗರ ಚಾಲಕರಿಗೆ ತರಬೇತಿ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ನಿಯಮವನ್ನು ಚಾಲಕರು ಪಾಲನೆ ಮಾಡಬೇಕು. ವೇಗವಾಗಿ ಬಸ್‌ಗಳನ್ನು ಚಾಲನೆ ಮಾಡಕೂಡದು ಎಂದು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

    ನಿಯಮದ ವ್ಯವಸ್ಥೆಯಡಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತೇವೆ. ರಾಜ್ಯದಲ್ಲೇ ಚಾಮರಾಜನಗರ ವಿಭಾಗ ಹೆಚ್ಚು ಆದಾಯ ನೀಡುತ್ತದೆ. ಕಳೆದ ವರ್ಷ 37 ಕೋಟಿ ರೂ. ಆದಾಯವನ್ನು ನಮ್ಮ ವಿಭಾಗ ಮಾಡಿದೆ. ಈಗ ನಮಗಿರುವ ಸವಾಲು ರಸ್ತೆ ಅಪಘಾತ ನಿಯಂತ್ರಣವಾಗಿದ್ದು, ಅದರ ತಡೆಗೆ ನಿಗಮ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪದೇ ಪದೆ ಅಪಘಾತ ಮಾಡುವ ಚಾಲಕರಿಗೂ ಖಡಕ್ ಸೂಚನೆ ನೀಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts