More

    ತಾಯಿ ಹಾಗೂ ಶಿಶು ಮರಣ ತಡೆಗಟ್ಟಲು ಕ್ರಮ,

    ಅಳವಂಡಿ: ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ನಿರ್ಮೂಲನೆಗೆ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಅವುಗಳ ಉಪಯೋಗ ಪಡೆದುಕೊಂಡು ಸದೃಡ ಆರೋಗ್ಯ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೆಶಕ ತಿಪ್ಪಣ್ಣ ಶಿರಸಗಿ ತಿಳಿಸಿದರು.

    ಇದನ್ನೂ ಓದಿ: ತಾಯಿ-ಶಿಶು ಮರಣ ತಡೆಗೆ ಅಗತ್ಯ ಕ್ರಮ ವಹಿಸಿ: ಅಧಿಕಾರಿಗಳಿಗೆ ಡಿಸಿ ಸಿ. ಸತ್ಯಭಾಮಾ ಸೂಚನೆ

    ಜಿಲ್ಲಾಡಳಿತ, ಜಿಪಂ ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣಾ ಅಭಿಯಾನದಡಿ ನಡೆದ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ನಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು.

    ಸದೃಡ, ಶಸಕ್ತ, ಸಾಕ್ಷರತಾ ಭಾರತದ ನಿರ್ಮಾಣವಾಗಲು ಆರೋಗ್ಯವಂತ ಸಮಾಜ ಅವಶ್ಯ, ತಾಯಂದಿರು, ಗರ್ಬಿಣಿಯರು ಹಾಗೂ ಮಕ್ಕಳಿಗೆ ಹಸಿರು ತರಕಾರಿ, ಮೊಕೆೆಯೊಡೆದ ಕಾಳು, ಸಿರಿಧಾನ್ಯಗಳು ಹಾಗೂ ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ಆರೋಗ್ಯ ರಕ್ಷಣೆ ಹಾಗೂ ಬೆಳವಣಿಗೆಗೆ ಸಮತೋಲನ ಆಹಾರ ಸೇವನೆ ಅತ್ಯಂತ ಮುಖ್ಯ ಎಂದರು.

    ವೈದ್ಯಾಧಿಕಾರಿ ಡಾ.ಸಿ.ಸಿ.ವಾಚದಮಠ ಮಾತನಾಡಿ, ಗರ್ಭಿಣಿಯರು, ಮಕ್ಕಳು, ಬಾಣಂತಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಾಗೂ ಕ್ರಮಬದ್ದ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ನಿಸರ್ಗದತ್ತವಾಗಿ ಸಿಗುವ ಆಹಾರ ಬಳಸಬೇಕು ಹಾಗೂ ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ದೇಹಕ್ಕೆ ಶ್ರಮ ನೀಡಬೇಕು ಮನಸ್ಸಿಗೆ ಶಾಂತಿ ನೀಡಬೇಕು ಇದು ಸಹಜ ಹೆರಿಗೆಗೆ ಅನೂಕೂಲ ಆಗಲಿದೆ ಎಂದರು.

    ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಸಿಡಿಪಿಓ ಆರ್.ಜಯಶ್ರೀ, ಎಸಿಡಿಪಿಓಗಳಾದ ರೂಪಾ ಗಂಧದ, ಶರಣಪ್ಪ, ವಲಯ ಮೇಲ್ವಿಚಾರಕರಾದ ಬಸಮ್ಮ, ರೆಹಮತ್‌ಬೀ, ಪ್ರೀತಿ ಕೋರೆ, ಚಂದನ ಗ್ರಾಪಂ ಅಧ್ಯಕ್ಷೆ ರೆಹಮತ್‌ಬೀ, ಗ್ರಾಪಂ ಕಾರ್ಯದರ್ಶಿ ಮಂಜುನಾಥಯ್ಯ, ರಮೇಶ, ಲಕ್ಕಪ್ಪ, ಗವಿಸಿದ್ದಪ್ಪ, ವಸಂತ, ಕಾಶಪ್ಪ, ಯಲ್ಲವ್ವ, ಆಸ್ಮಾ, ಕಿರಣ, ಕೆಂಚವ್ವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts