More

    ಬಿ.ಎಚ್.ರಸ್ತೆ ವಿಸ್ತರಣೆಗೆ 65 ಕೋಟಿ ರೂ. ಮಂಜೂರು

    ಸಾಗರ: ಬಿ.ಎಚ್.ರಸ್ತೆ ವಿಸ್ತರಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರದಿಂದ ಮೊದಲ ಹಂತದಲ್ಲಿ 65 ಕೋಟಿ ರೂ. ಅನುದಾನ ಮಂಜೂರಾಗಿದೆ. ರಸ್ತೆ ವಿಸ್ತರಣೆಗೆ ಸಂಬಂಧಿಸಿ ಎರಡ್ಮೂರು ದಿನಗಳಲ್ಲಿ ಅಳತೆ ಪ್ರಕ್ರಿಯೆ ಮುಗಿಯಲಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.

    ಬಿ.ಎಚ್.ರಸ್ತೆಯಲ್ಲಿ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಮಂಗಳವಾರ ನಗರಸಭೆಯಿಂದ ಕೈಗೊಳ್ಳಲಾಗಿರುವ ಅಳತೆ ಪ್ರಕ್ರಿಯೆ ಪರಿಶೀಲಿಸಿ ಮಾತನಾಡಿ, ಸಾಗರ ನಗರ ವ್ಯಾಪ್ತಿ ಆರಂಭಗೊಳ್ಳುವ ತ್ಯಾಗರ್ತಿ ಸರ್ಕಲ್​ನಿಂದ ಕೆಎಸ್​ಆರ್​ಟಿಸಿ ಡಿಪೋವರೆಗೆ 8 ಕಿಮೀ ರಸ್ತೆ ವಿಸ್ತರಣೆಗೆ ಅಳತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ರಸ್ತೆ ಅಗಲೀಕರಣಕ್ಕಾಗಿ ಸಾರ್ವಜನಿಕರು ಸಾಕಷ್ಟು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದರು ಮತ್ತು ಶಾಸಕರ ವಿಶೇಷ ಪ್ರಯತ್ನದಿಂದ ಅನುದಾನ ಮಂಜೂರಾತಿಯಾಗಿದೆ. ಈ ಬಾರಿ ಮಳೆಗಾಲ ಆರಂಭವಾಗುವಷ್ಟರಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

    ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ರಸ್ತೆ ಮಾರ್ಕಿಂಗ್ ಕಾರ್ಯ ನಡೆಯುತ್ತಿದ್ದು, 3 ತಂಡಗಳಲ್ಲಿ ನಗರಸಭೆ ಅಧಿಕಾರಿಗಳು 8 ಕಿಮೀ ವ್ಯಾಪ್ತಿಯಲ್ಲಿ ಅಳತೆ ಕಾರ್ಯ ಆರಂಭಿಸಿದ್ದು, ಶುಕ್ರವಾರದೊಳಗೆ ಮುಗಿಯಲಿದೆ. ಒಟ್ಟು 22.50 ಮೀ. ಅಗಲದ ಚತುಷ್ಪಥ ರಸ್ತೆ ನಿರ್ವಣವಾಗಲಿದೆ. ಇದರಲ್ಲಿ ರಸ್ತೆ ಮಧ್ಯೆ 1.50 ಮೀ. ವಿಭಜಕ ನಿರ್ವಿುಸಿ ಗಿಡಗಳನ್ನು ಬೆಳೆಸಲಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ 2.50 ಮೀ. ಒಳಚರಂಡಿ ಮತ್ತು ಫುಟ್​ಪಾತ್ ನಿರ್ವಣವಾಗಲಿದೆ ಎಂದರು.

    ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಕಂದಾಯ ವಿಭಾಗದ ಮಂಜುನಾಥ ಗೌಡ, ಹರೀಶ್, ಸಚಿನ್, ರಘು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts