More

    ವಿಶ್ವಮಾನ್ಯತೆ ಪಡೆಯುತ್ತಿದೆ ಹಿಂದು ಧರ್ಮಾಚರಣೆ ‘ನಮಸ್ಕಾರ…’; ಏನಿದರ ಅರ್ಥ, ಮಹತ್ವ?

    ವಿಶ್ವಮಾನ್ಯತೆ ಪಡೆಯುತ್ತಿದೆ ಹಿಂದು ಧರ್ಮಾಚರಣೆ 'ನಮಸ್ಕಾರ...'; ಏನಿದರ ಅರ್ಥ, ಮಹತ್ವ?ಸೂರ್ಯನಮಸ್ಕಾರದ ವಿಧಾನದಲ್ಲಿ ಸಹಜವಾಗಿಯೇ ಅನೇಕ ಯೋಗಾಸನ, ಪ್ರಾಣಾಯಾಮ, ಬಂಧ, ಮುದ್ರೆ, ಧಾರಣ, ಮಂತ್ರಗಳು ಸೇರಿಕೊಂಡಿವೆ. ಅನುಲೋಮ-ವಿಲೋಮ ವಿಧಾನದಿಂದ ಪೂರಕ-ರೇಚಕ-ಕುಂಭಕಗಳು; ನಮಸ್ಕಾರಾಸನ, ಊರ್ಧ್ವನಮನಾಸನ, ಹಸ್ತಪಾದಾಸನ, ಏಕಪಾದ ಪ್ರಸರಣಾಸನ, ಚತುರಂಗ ದಂಡಾಸನ, ಭೂಧರಾಸನ, ಸಾಷ್ಟಾಂಗ ಪ್ರಣಿಪಾತಾಸನ, ಊರ್ಧ್ವಮುಖ ಶ್ವಾನಾಸನ (ಭುಜಂಗಾಸನ), ಅಧೋಮುಖ ಶ್ವಾನಾಸನ ಮುಂತಾದ ಯೋಗಾಸನಗಳು ಸಹಜವಾಗಿ ಏರ್ಪಡುತ್ತವೆ. ಈ ಭಂಗಿಗಳಲ್ಲಿ ಶ್ವಾಸೋಚ್ಛ್ವಾಸಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯಬೇಕಾಗಿರುವುದರಿಂದ ಪ್ರಾಣಸಂಚಾರವು ಅತ್ಯಂತ ಉತ್ತಮವಾಗಿ ನಡೆಯುತ್ತದೆ. ಮಂತ್ರೋಚ್ಚಾರಣೆ ಮತ್ತು ಬೀಜಾಕ್ಷರಗಳ ಪಠಣದಿಂದ ನಾಡೀಶುದ್ಧಿಯುಂಟಾಗಿ ಭಾವಶುದ್ಧಿ ಹಾಗೂ ಮನಸ್ಸಿನ ಏಕಾಗ್ರತೆಗಳು ಪ್ರಾಪ್ತವಾಗುತ್ತವೆ. ವಿಧಿಗೆ ಅನುಸಾರವಾದ ಸೂರ್ಯನಮಸ್ಕಾರವು ಒಂದು ವಿಧವಾದ ಉತ್ತಮ ಸೂರ್ಯೋಪಾಸನೆಯೇ ಆಗಿದೆ.

    ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್’ ಎನ್ನುವಂತೆ ಸೂರ್ಯೋಪಾಸನೆಯಿಂದ ಶರೀರ-ವಾಕ್ಕು-ಮನಸ್ಸುಗಳ ಆರೋಗ್ಯವೂ ಸಿದ್ಧಿಸಿ ಸಾಧಕನಿಗೆ ಆತ್ಮದರ್ಶನದ ಮಾರ್ಗವು ತೆರೆಯುತ್ತದೆ. ಉಪಾಸನಾಯೋಗ್ಯವಾದ ತನ್ನ ವಿಭೂತಿಗಳನ್ನು ವರ್ಣಿಸುವಾಗ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಆದಿತ್ಯರೆಲ್ಲರೂ ತನ್ನ ವಿಭೂತಿಗಳೆಂದು ಹೇಳುತ್ತ ಅವರಲ್ಲಿ ಪ್ರಭವಾತಿಶಯವುಳ್ಳ ವಿಷ್ಣುವೆಂಬ ಆದಿತ್ಯನು ತಾನೇ ಎಂಬುದಾಗಿ ಹೇಳಿದ್ದಾನೆ. ಜ್ಯೋತಿಶ್ಚಕ್ರದಲ್ಲಿ ಇರುವ ಎಲ್ಲ ಜ್ಯೋತಿರ್ಮಂಡಲಗಳೂ ಭಗವಂತನ ವಿಭೂತಿಗಳೇ ಆಗಿವೆ. ‘ಜ್ಯೋತಿಷಾಂ ರವಿರಂಶುಮಾನ್’ ಎಂದು ಹೇಳುತ್ತ ಶ್ರೀಕೃಷ್ಣನು ತೇಜೋರಾಶಿಯಾದ ಸೂರ್ಯನು ತಾನೇ ಎಂಬುದಾಗಿ ನಿರ್ದೇಶಿಸಿ ವಿಶ್ವಾಧ್ಯಕ್ಷನಾದ ಪರಮಾತ್ಮನ ಭಾವನೆಯಿಂದ ಸೂರ್ಯದೇವನ ಉಪಾಸನೆ ಮಾಡಬೇಕೆಂದು ಸೂಚಿಸಿದ್ದಾನೆ. ಅಂತರಂಗ ಮತ್ತು ಬಹಿರಂಗಗಳ ಅಂಧಕಾರವನ್ನು ಹೋಗಲಾಡಿಸಿ ಆರೋಗ್ಯಾದಿ ಸಕಲ ಸಂಪತ್ತುಗಳನ್ನು ನೀಡುವ ವೇದಾತ್ಮನಾದ ಸೂರ್ಯದೇವನು ಸಕಲ ಜೀವಕೋಟಿಗಳಿಗೂ ಸರ್ವಥಾ ಉಪಾಸ್ಯನಾದ ಪರದೈವ ಪರಮಾತ್ಮನೇ ಆಗಿದ್ದಾನೆ. ‘ತಮಸೋ ಮಾ ಜ್ಯೋತಿರ್ಗಮಯ’ ಎಂದು ಆತ್ಮಜ್ಞಾನಕ್ಕಾಗಿ ಸರ್ವೆಶ್ವರನಾದ ಆ ಪರಮಾತ್ಮನನ್ನು ಸರ್ವದಾ ನಮಸ್ಕರಿಸೋಣ.

    ನಮಸ್ಕಾರ!

    ಹಿಂದೂಧರ್ಮವೆಂಬುದು ಒಂದು ಜೀವನಪದ್ಧತಿ. ಹಿಂದು ಧರ್ಮದ ಆಚರಣೆಗಳ ಹಿಂದಿನ ಒಂದೊಂದು ತತ್ತ್ವವೂ ವೈಜ್ಞಾನಿಕ, ಸಾಮಾಜಿಕ ಹಿತವನ್ನೇ ಹೊಂದಿದೆ. ನಮ್ಮ ಆಚರಣೆಗಳ ಕುರಿತು ಅಸಡ್ಡೆ-ತಿರಸ್ಕಾರ ತೋರುವ ಇಂದಿನ ಯುವಪೀಳಿಗೆಗೆ; ಪಾಶ್ಚಿಮಾತ್ಯರು ತಮ್ಮ ಜ್ಞಾನದೃಷ್ಟಿಯಿಂದ ನಿಷ್ಪಕ್ಷಪಾತವಾಗಿ ವಿಮಶಿಸಿ ನಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯೆನಿಸುತ್ತದೆ. ಸನಾತನ ಧರ್ಮದ ಕುರಿತು ಪಾಶ್ಚಿಮಾತ್ಯನೊಬ್ಬ ನೀಡಿದ ಹೃದಯವಾಣಿ – ‘ಹಿಂದೂಧರ್ಮ ಎಂಬುದು ಅರ್ನ್ಯಘ ರತ್ನಗಳ ಆಳ ಸಾಗರ, ಕೇವಲ ಕಿರಿದಾದ ತೊರೆಯಲ್ಲ’ ಎಂದು ನಮ್ಮ ಹಲವು ಆಚರಣೆಗಳಲ್ಲಿ ಈಗ ವಿಶ್ವಮಾನ್ಯತೆ ಪಡೆದಿರುವ ನಮಸ್ಕಾರವೂ ಒಂದು.

    ನಮಸ್ಕಾರ! ಏನಿದರ ಅರ್ಥ?

    ನಮಸ್ ಎಂದರೆ ‘ಪ್ರಹ್ವತೆ’ ಅಂದರೆ ನಮ್ರತೆ. ‘ನಮ್ (‘ಣಮು ಪ್ರಹ್ವತ್ವೇ ಶಬ್ದೇ ಚ’) ಎಂಬ ಮೂಲ ಧಾತುವಿನಿಂದ ಹುಟ್ಟಿದ ರೂಪವಿದು. ಹೀಗೆ ನಮಸ್ಕಾರ ಇರುವುದು ಮನಸ್ಸಿನಲ್ಲಿ. ಕೇವಲ ಅಡ್ಡ ಬೀಳುವುದೇ ನಮಸ್ಕಾರವಲ್ಲ. ಕ್ರಿಯೆಗೆ ಒಳಪಡಿಸುವುದು. ಹೀಗೆ ವಂದನದಲ್ಲಿ ಅನುಸಂಧಾನವೇ ಪ್ರಧಾನ. ಅನುಸಂಧಾನವೇ ವಂಧನದ ಇಂಧನ, ಅದುವೇ ತಿರುಳು, ಅದು ಹುರುಳು. ಅದಿಲ್ಲದ ವಂದನೆ ಬರೇ ವಿಡಂಬನೆ. ಅನುಸಂಧಾನವೇ ವಂದನೆಯೊಳಗಿನ ಇಚ್ಛಾ, ಕ್ರಿಯಾ, ಧನ ಹಾಗೂ ಮನಃಶಕ್ತಿಯಾಗಿದೆ.

    ಮಕ್ಕಳು ಏಕೆ ಬೆರಳು ಚೀಪುತ್ತಾರೆ? ಪಾಲಕರು ಯಾವಾಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts