More

    ಹೆಚ್ಚು ಲಗೇಜ್​ ತಂದಿದ್ದಕ್ಕೆ ಮಾರಿಷಸ್​ ಅಧ್ಯಕ್ಷನನ್ನೇ ತಡೆದ ಏರ್​ ಇಂಡಿಯಾ ಸಿಬ್ಬಂದಿ

    ವಾರಾಣಸಿ: ನಿಯಮಿತ ಲಗೇಜ್​ಗಿಂತ ಹೆಚ್ಚು ಲಗೇಜ್​ ಹೊಂದಿದ್ದ ಕಾರಣ ಏರ್​ ಇಂಡಿಯಾದ ಸಿಬ್ಬಂದಿ ಮಾರಿಷಸ್​ ದೇಶದ ಅಧ್ಯಕ್ಷರಿಗೇ ವಿಮಾನವನ್ನು ಹತ್ತುವುದಕ್ಕೆ ಅನುಮತಿ ನೀಡಿಲ್ಲ. ವಾರಾಣಸಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಲಗೇಜ್​ಗೆ ಶುಲ್ಕ ಪಾವತಿಸಿದ ನಂತರವೇ ವಿಮಾನ ಹತ್ತುವಂತೆ ಪೃಥ್ವಿರಾಜ್​ಸಿಂಗ್​ ರೂಪನ್​ ಅವರನ್ನು ತಡೆಹಿಡಿಯಲಾಗಿದೆ.

    ಮಾರಿಷಸ್​ ದೇಶದ ಅಧ್ಯಕ್ಷರಾಗಿರುವ ಪೃಥ್ವಿರಾಜ್​ಸಿಂಗ್​ ಅವರು ಆರು ಜನರ ನಿಯೋಗದೊಂದಿಗೆ ವಾರಾಣಸಿಗೆ ಎರಡು ದಿನಗಳ ಪ್ರವಾಸಕ್ಕೆ ಬಂದಿದ್ದರು. ವಾರಾಣಸಿಯಿಂದ ದೆಹಲಿಗೆ ಹೊರಟ ಅವರನ್ನು ಏರ್​ ಇಂಡಿಯಾ ಸಿಬ್ಬಂದಿಗಳು ತಡೆದಿದ್ದಾರೆ. ಅವರ ಬಳಿ ಹೆಚ್ಚಿನ ಲಗೇಜ್​ ಇದ್ದ ಕಾರಣ ಅದಕ್ಕೆ ಶುಲ್ಕ ಪಾವತಿಸಿದ ನಂತರವೇ ಅವರಿಗೆ ವಿಮಾನ ಹತ್ತಲು ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ವಿಮಾನ ನಿಲ್ದಾಣದ ನಿರ್ದೇಶಕ ಆಕಾಶ್​ದೀಪ್​ ಮಥೂರ್​ ಸ್ಥಳಕ್ಕೆ ಬಂದಿದ್ದು, ಅತಿಥಿಗಳಿಗೆ ವಿಮಾನದಲ್ಲಿ ತೆರಳಲು ಅವಕಾಶ ಮಾಡಿಕೊಡುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹಾಗಿದ್ದರೂ ಸಿಬ್ಬಂದಿ ನಿಯಮ ಪಾಲನೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಏವಿಯೇಷನ್​ ಸಚಿವ ಮತ್ತು ಏರ್​ ಇಂಡಿಯಾದ ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಬಳಿ ಅತಿಥಿಗಳಿಗೆ ಹೆಚ್ಚಿನ ಶುಲ್ಕ ವಿಧಿಸದಿರುವಂತೆ ಹೇಳಿದ ನಂತರವೇ ಅತಿಥಿ ನಿಯೋಗಕ್ಕೆ ವಿಮಾನ ಹತ್ತಲು ಅನುಮತಿ ನೀಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts