More

    ಕ್ರೀಡೆಗಳಿಂದ ಮಾನಸಿಕ ನೆಮ್ಮದಿ

    ಗುರುಬಸವ ಸ್ವಾಮೀಜಿ ಅನಿಸಿಕೆ ಸಂತೆಕೆಲ್ಲೂರಿನಲ್ಲಿ ವಲಯ ಮಟ್ಟದ ಕ್ರೀಡಾಕೂಟ

    ಮಸ್ಕಿ: ಕ್ರೀಡಾಕೂಟಗಳ ಆಯೋಜನೆ ಮಕ್ಕಳ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಿದೆ. ಇದರಿಂದ ಮಕ್ಕಳ ಓದಿನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎಂದು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

    ಸಂತೆಕೆಲ್ಲೂರು ಗ್ರಾಮದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣ ನೆರವೆರಿಸಿ ಆಶೀರ್ವಚನ ನೀಡಿದರು. ನಿತ್ಯ ಪಾಠಗಳಲ್ಲಿ ತಲ್ಲೀನರಾಗುವ ಮಕ್ಕಳ ಮನಸು ಪ್ರುಲ್ಲಗೊಳಿಸಲು ಸರ್ಕಾರ ದೈಹಿಕ ಶಿಕ್ಷಣ ಕಡ್ಡಾಯ ಕಡ್ಡಾಯಗೊಳಿಸಿದೆ ಎಂದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಥ್ರೊ ಬಾಲ್ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts