More

    ಬ್ಯಾಗವಾಟ ಶಾಲೆಗೆ ಜಿಪಂ ಸಿಇಒ ಭೇಟಿ

    ಮಾನ್ವಿ: ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಭೋಜನಾಲಯದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಸಂವಾದ ನಡೆಸಿದ ಜಿಪಂ ಸಿಇಒ ಶಶಿಧರ ಕುರೇರ ಬಳಿಕ ಬಿಸಿಯೂಟ ಸವಿದರು.

    ಶಾಲಾ ಶೌಚಗೃಹ ವೀಕ್ಷಣೆ ಮಾಡಿದ ಜಿಪಂ ಸಿಇಒ, ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ-ಮನೆಗೆ ನಳದ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಗುಣಮಟ್ಟದ ಪೈಪ್ ಮತ್ತು ನಳ ಅಳವಡಿಸಿದ ಬಳಿಕ ಖಾತ್ರಿಪಡಿಸಿಕೊಂಡು ಹಸ್ತಾಂತರಕ್ಕೆ ಮುಂದಾಗಬೇಕೆಂದು ಗ್ರಾಪಂ ಪಿಡಿಒಗೆ ಸೂಚಿಸಿದರು.

    ತಾಲೂಕಿನ ಕಪಗಲ್ ಗ್ರಾಪಂ ವ್ಯಾಪ್ತಿಯ ನರೇಗಾ ಯೋಜನೆಯಡಿ ಕೈಗೊಂಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಕಟ್ಟಡ ಗುಣಮಟ್ಟವಾಗಿರಬೇಕು. ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಿ ಹಸ್ತಾಂತರ ಮಾಡಲು ತಿಳಿಸಿದರು.

    ನೀರಮಾನ್ವಿ ಗ್ರಾಪಂ ಕೋಳಿ ಕ್ಯಾಂಪ್‌ನಲ್ಲಿ ಜಿಕಾ ವೈರಸ್ ಕಾಣಿಸಿಕೊಂಡಿದ್ದ ಬಾಲಕಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಗ್ರಾಮದ ಆದರ್ಶ ಶಾಲೆಯ ಶೌಚಗೃಹ, ಬಿಸಿಯೂಟದ ಕೋಣೆ, ಶಾಲಾ ಭೋಜನಾಲಯ ಕಾಮಗಾರಿ ವೀಕ್ಷಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಲು ಪಿಡಿಒ ಶರಣಬಸವಗೆ ಮತ್ತು ತಾಂತ್ರಿಕ ಸಿಬ್ಬಂದಿಗೆ ಸೂಚಿಸಿದರು.

    ನಂತರ ಸಾದಪೂರು ಗ್ರಾಪಂನ ಅರಣ್ಯ ಇಲಾಖೆ ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ತಾಪಂ ಇಒ ಎಂಡಿ ಸೈಯದ್ ಪಟೇಲ್, ಕೃಷಿ ಅಧಿಕಾರಿ ಹುಸೇನ್ ಬಾಷಾ, ಬಿಇಒ ಚಂದ್ರಶೇಖರ ದೊಡ್ಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts