More

    ವೈವಿಧ್ಯಮಯ ಮಂಗಳೂರು ದಸರಾ

    ಮಂಗಳೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೊರತುಪಡಿಸಿದರೆ ‘ಮಂಗಳೂರು ದಸರಾ’ ಹೆಸರಿನಲ್ಲಿ ನವರಾತ್ರಿ ಉತ್ಸವ ವೈಭವಯುತವಾಗಿ ನಡೆಯುವುದು ಮಂಗಳೂರಿನಲ್ಲಿ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಈ ಉತ್ಸವ ಆಯೋಜನೆಯಾಗುತ್ತಿದ್ದರೂ ಕರಾವಳಿಯ ಸಮಸ್ತ ಸಮಾಜ ಈ ಉತ್ಸವದಲ್ಲಿ ಕೈಜೋಡಿಸುವುದು ವಿಶೇಷ.

    ಶೃಂಗಾರಗೊಳ್ಳುವ ಇಡೀ ನಗರ, ವಿದ್ಯುತ್ ದೀಪಾಲಂಕಾರ, ನಾಲ್ಕು ದಿಕ್ಕುಗಳಿಂದಲೂ ಕೇಳುವ ಹುಲಿಕುಣಿತದ ತಾಸೆ ಪೆಟ್ಟು ಉತ್ಸವದುದ್ದಕ್ಕೂ ನಗರವನ್ನು ಹಬ್ಬದ ಮನೆಯನ್ನಾಗಿಸುತ್ತದೆ. ಕುದ್ರೋಳಿ ಕ್ಷೇತ್ರದ ವಿಶಾಲ ಸಭಾಂಗಣದಲ್ಲಿ ಪ್ರತಿಷ್ಠಾಪಿಸುವ ನವದುರ್ಗೆಯರು, ಗಣಪತಿ ವಿಗ್ರಹ ಹಾಗೂ ಶಾರದಾ ಮಾತೆಯ ವಿಗ್ರಹಗಳು ಸಾಕ್ಷಾತ್ ನವದುರ್ಗೆಯರು ಮತ್ತು ಶಾರದಾ ಮಾತೆಯೇ ಭೂಮಿಗೆ ಇಳಿದು ಬಂದ ಅನುಭೂತಿಯನ್ನು ಭಕ್ತರಲ್ಲಿ ಮೂಡಿಸುತ್ತದೆ.

    ಇದನ್ನೂ ಓದಿ: ಶ್ರೀಲಂಕಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಐಸಿಐಸಿಐ ಬ್ಯಾಂಕ್

    ಕುದ್ರೋಳಿ ಕ್ಷೇತ್ರವಲ್ಲದೆ ಸಾಂಪ್ರದಾಯಿಕ ಆಚರಣೆಗಳಿಂದ ಮಹತೋಭಾರ ಶ್ರೀ ಮಂಗಳಾದೇವಿ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನಗಳು ಪ್ರಸಿದ್ಧಿ ಪಡೆದಿವೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಮಂಗಳೂರು ದಸರಾದಲ್ಲಿ ವರ್ಷಂಪ್ರತಿ ನಡೆಯುವ ಗೌಜಿಗದ್ದಲ ಇಲ್ಲದಿದ್ದರೂ ಪಾಲ್ಗೊಳ್ಳುವ ಭಕ್ತರು ಅಧಿಕ ಸಂಖ್ಯೆಯಲ್ಲಿದ್ದಾರೆ.

    ಪಾಕಿಸ್ತಾನ ಸೇನೆಯ ಚೀನಾ ನಿರ್ಮಿತ ಕ್ವಾಡ್​ಕಾಪ್ಟರ್​ನ್ನು ಹೊಡೆದುರುಳಿಸಿತು ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts