More

    ಸಾಗಾಣಿಕೆ ವೆಚ್ಚ ಪರಿಷ್ಕರಣೆಗೆ ಒತ್ತಾಯ: ಎಡಿಸಿಗೆ ಮನವಿ ಸಲ್ಲಿಸಿದ ಲಾರಿ ಮಾಲೀಕರು

    ಮಂಡ್ಯ: ಪ್ರಸಕ್ತ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪದಾಧಿಕಾರಿಗಳು, ಲಾರಿ ಮತ್ತು ಟ್ರಾೃಕ್ಟರ್ ಮಾಲೀಕರಿಗೆ ಆಗುತ್ತಿರುವ ಶೋಷಣೆ ಕುರಿತಂತೆ ಈಗಾಗಲೇ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸ್ಪಂದಿಸಿದ ವರು ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಆದರೂ ದರ ಪರಿಷ್ಕರಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ದಕ್ಷಿಣ ಕರ್ನಾಟಕ ಕಾರ್ಖಾನೆಗಳು ಜೂನ್ ತಿಂಗಳಲ್ಲೇ ಪ್ರಾರಂಭವಾಗುತ್ತವೆ. ಪ್ರತೀ ವರ್ಷ ಕಾರ್ಖಾನೆ ಪ್ರಾರಂಭಕ್ಕೂ ಮುನ್ನವೇ ದರ ನಿಗದಿ ಮಾಡಬೇಕಾಗಿದೆ. ಆದ್ದರಿಂದ ಈ ಸಾಲಿನ ಸಾಗಾಣಿಕಾ ವೆಚ್ಚವನ್ನು ಪರಿಷ್ಕರಣೆ ಮಾಡಬೇಕೆಂದು ಕೋರಲಾಗಿದೆ. ಆಯುಕ್ತರು ದರ ನಿಗದಿ ಪಟ್ಟಿಯನ್ನು ಎಲ್ಲ ಸಕ್ಕರೆ ಕಾರ್ಖಾನೆಗೂ ಕಳುಹಿಸಿದ್ದಾರೆ. ಆದರೆ ಆಡಳಿತ ಮಂಡಳಿ ಈವರೆವಿಗೂ ದರ ನಿಗದಿ ಮಾಡಿಲ್ಲ. ಆಯುಕ್ತರು ನೀಡಿರುವ ದರವನ್ನು ಜಾರಿಗೊಳಿಸಿ ಲಾರಿ ಮಾಲೀಕರ ಜೀವನ ನಿರ್ವಹಣೆಗೆ ಅನುಕೂಲ ಮಾಡಕೊಡಬೇಕೆಂದು ಮನವಿ ಮಾಡಿದರು.
    ಒಕ್ಕೂಟದ ಅಧ್ಯಕ್ಷ ಕೆ.ಎಸ್.ವೇಣುಗೋಪಾಲ್, ಬಲರಾಮು, ಸತ್ಯಾನಂದ, ಸಿದ್ದಪ್ಪ, ಮಹೇಶ, ಜಗದೀಶ, ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts