More

    ಮೋದಿ ಕಾರ್ಯಕ್ರಮ ಯಶಸ್ವಿಗೊಳಿಸಿ

    ತುರುವೇಕೆರೆ: ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಶಾಸಕನಾಗಿ, 2 ಬಾರಿ ನಿಗಮ ಮಂಡಳಿ ಅದ್ಯಕ್ಷನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ಶಾಸಕ ಮಸಾಲಾ ಜಯರಾಂ ಹೇಳಿದರು.
    ಪಟ್ಟಣದ ಸಮೀಪದ ಶಾಸಕರ ತೋಟದ ಮನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ಸರ್ಕಾರ ರೈತ, ದೀನ ದಲಿತರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ತಾಲೂಕಿನ ಪ್ರತಿ ಗ್ರಾಮಕ್ಕೂ ಸಿಸಿ ರಸ್ತೆ ಸೇರಿ ಮೂಲ ಸೌಕರ್ಯಗಳನ್ನು ಮಾಡಲಾಗಿದೆ.

    ಸುಮಾರು 15 ವರ್ಷಗಳಿಂದ ಅಭಿವೃದ್ಧಿ ಕಾಣದ ದಂಡಿನಶಿವರ ಹೋಬಳಿಯಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಅನುದಾನದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು. ೆ.6ಕ್ಕೆ ನಿಟ್ಟೂರಿನ ಎಚ್‌ಎಎಲ್ ಘಟಕದ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ತಾಲೂಕಿನಿಂದ 5ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.

    ಮುನಿಯೂರು ವಿವೇಕಾನಂದನಗರ, ಹೊಣಕೆರೆ, ದೊಂಕಿಹಳ್ಳಿ ಗ್ರಾಮದ ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಎಸ್‌ಸಿ ಘಟಕದ ಮುಖಂಡ ಗಂಗರಾಜು, ಗ್ರಾಪಂ ಸದಸ್ಯ ಗೊಟ್ಟಿಕೆರೆ ಕಾಂತರಾಜು, ಜಿಲ್ಲಾ ಉಪಾಧ್ಯಕ್ಷ ಕೆಂಪೇಗೌಡ. ಯುವಮೋರ್ಚಾ ಜಿಲ್ಲಾಧ್ಯಕ್ಷ ಯಶಸ್, ತಾಲೂಕು ಯುವ ಅಧ್ಯಕ್ಷ ಹಟ್ಟಿಹಳ್ಳಿಗೌರೀಶ್, ಮುಖಂಡರಾದ ವಿ.ಬಿ.ಸುರೇಶ ಕಾಳಂಜೀಹಳ್ಳಿ, ಸೋಮಶೇಖರ್, ಭರತ್, ಲಿಂಗರಾಜೇಗೌಡ ಪ್ರಕಾಶ್, ರಾಮೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts