More

    ತೇವಾಂಶ ತಡೆಯಲು ಬಸಿಗಾಲುವೆ ಮಾಡಿ

    ಹೊಳಲ್ಕೆರೆ: ಮೆಕ್ಕೆಜೋಳ ಬಿತ್ತನೆ ಬಳಿಕ ಕಳೆದ ಎರಡು ವಾರದಿಂದ ಹೆಚ್ಚು ಮಳೆಯಾಗುತ್ತಿದೆ. ಹೊಲಗಳಲ್ಲಿ ನೀರು ನಿಂತು ರೋಗ ಬಾಧೆ, ಪೋಷಕಾಂಶಗಳ ಕೊರತೆ ಉಂಟಾಗಿದ್ದು, ಇಳುವರಿ ಮೇಲೆ ಪರಿಣಾಮ ಬೀರಲಿದೆ.

    ರೈತರು ಬಸಿಗಾಲುವೆ ಮಾಡಿ ನೀರನ್ನು ಹೊರಹಾಕಬೇಕು ಎಂದು ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ ಸಲಹೆ ನೀಡಿದರು.

    ತಾಲೂಕಿನ ರಾಮಗಿರಿ ಹೋಬಳಿಯ ಜಮೀನುಗಳಿಗೆ ಶನಿವಾರ ಭೇಟಿ ನೀಡಿದ ಅವರು, ಯಾವುದೇ ಬೆಳೆಗಳಿಗೆ ತೇವಾಂಶ ಹೆಚ್ಚಾದರೆ ರೋಗ ಕಾಣಿಸಿಕೊಳ್ಳಲಿದ್ದು, ಇಳುವರಿ ಕಡಿಮೆ ಆಗಲಿದೆ.

    ರೈತರು ಕಳೆ ಬೆಳೆಯದಂತೆ ಎಡೆಕುಂಟೆ ಹೊಡೆಯಬೇಕು. ಪೋಷಕಾಂಶಗಳ ಕೊರತೆ ನೀಗಿಸಲು ನೀರಿನಲ್ಲಿ ಕರಗುವ ಸಂಯುಕ್ತ ಗೊಬ್ಬರಗಳನ್ನು ಸಿಂಪಡಿಸಬೇಕು ಎಂದರು.

    ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್ ಮಾತನಾಡಿ, ಬಿ.ದುರ್ಗ, ರಾಮಗಿರಿ ಹೋಬಳಿಯಲ್ಲಿ ಹೆಚ್ಚು ಮೆಕ್ಕೆಜೋಳ ಬಿತ್ತನೆ ಆಗಿದ್ದು, ಒಂದು ತಿಂಗಳ ಬೆಳೆ ಇದೆ.

    ಕೆಲವು ಕಡೆ ಲದ್ದಿಹುಳು ಬಾಧೆ ಕಂಡುಬಂದಿದೆ. ರೈತಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಕೀಟನಾಶಕ ಲಭ್ಯವಿದೆ ಎಂದು ಹೇಳಿದರು.

    ತಾಲೂಕಿನಲ್ಲಿ ಈ ವರ್ಷ 35 ಸಾವಿರ ಪೈಕಿ ಈಗಗಾಲೇ 30,636 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರು ರಾಗಿ ಬಿತ್ತನೆಗೆ ಮಳೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು.

    ಮೆಕ್ಕೆಜೋಳದ ಬೆಳೆಗೆ ಪ್ರಮುಖವಾಗಿ ಲದ್ದಿ ಹುಳದ ಬಾಧೆ ಕಾಣಿಸಿಕೊಳ್ಳಲಿದ್ದು, ಬೆಳೆಯನ್ನು ಹಾಳು ಮಾಡುತ್ತವೆ. ಮೋಡ ಕವಿದ ವಾತಾವರಣದಲ್ಲಿ ಈ ಹುಳುಗಳ ಹಾವಳಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts