More

    ಮಹಾರಾಷ್ಟ್ರ ಅಭಿವೃದ್ದಿಯೆ ನನ್ನ ಮುಖ್ಯ ಗುರಿ; ಏಕನಾಥ ಶಿಂಧೆ

    ಮುಂಬೈ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಭಾರಿ ಟ್ವಿಸ್ಟ್ ನಡೆದಿದ್ದು, ಕೊನೆ ಕ್ಷಣದಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್​ ಶಿಂಧೆ ಅವರಿಗೇ ಮುಖ್ಯಮಂತ್ರಿ ಪಟ್ಟ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಅವರು ಸಿಎಂ ಪಟ್ಟ ನೀಡಿದ ಬಿಜೆಪಿ ಹಾಗೂ ಶಿವಸೇನೆಯ ಶಾಸಕರಿಗೆ ಧನ್ಯವಾದ. ಅಲ್ಲದೇ ಮಹಾರಾಷ್ಟ್ರದ ಅಭಿವೃದ್ದಿಯೇ ನನ್ನ ಮುಖ್ಯ ಗುರಿ ಎಂದು ತಿಳಿಸಿದ್ದಾರೆ.

    ಇಲ್ಲಿಯವರೆಗೂ ಹಿರಿಯ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರೇ ಮುಖ್ಯಮಂತ್ರಿ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್​ ಶಿಂಧೆ ಅವರಿಗೇ ಮುಖ್ಯಮಂತ್ರಿ ಪಟ್ಟ ನೀಡಿದೆ.

    ಕೊನಕ್ಷಣದಲ್ಲಿ ಸಿಎಂ ಪಟ್ಟ; ಮುಖ್ಯಮಂತ್ರಿಯಾಗಿದ್ದ ಉದ್ಧವ್​ ಠಾಕ್ರೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ರಾತ್ರಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆದರೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಿಸಬೇಕಿದ್ದ ಶಿವಸೇನೆಯ ಬಂಡಾಯ ನಾಯಕ ಏಕನಾಥ್​ ಶಿಂಧೆ ಅವರಿಗೇ ಮುಖ್ಯಮಂತ್ರಿ ಪಟ್ಟ ನೀಡಲು ತೀರ್ಮಾನಿಸಲಾಗಿದೆ.
    ಈ ಕುರಿತು ಪತ್ರಿಕಾಗೋಷ್ಠಿ ಕರೆದ ಫಡ್ನವಿಸ್​ ಮಾಹಿತಿ ನೀಡಿದ್ದಾರೆ. ಸದ್ಯ ಏಕನಾಥ್​ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿದೆ. ಉಳಿದ ಬೆಳವಣಿಗೆಗಳ ಕುರಿತು ನಂತರದಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.

    ರಾತ್ರಿ ಪ್ರಮಾಣವಚನ: ಇಂದು ರಾತ್ರಿ 7.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಏಕನಾಥ ಶಿಂಧೆ, ಸಂಖ್ಯಾಬಲದ ಆಧಾರದ ಮೇಲೆ ಫಡ್ನವಿಸ್​ ಅವರೇ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅವರು ವಿಶಾಲ ಹೃದಯವಂತಿಕೆ ಮೆರೆದಿದ್ದು, ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೂ ಸಹ ಏಕನಾಥ ಶಿಂಧೆ ಧನ್ಯವಾದ ಅರ್ಪಿಸಿದ್ದಾರೆ.

    ಮಹಾರಾಷ್ಟ್ರದ ಮುಖ್ಯಮಂತ್ರಿ ಖುರ್ಚಿಗೆ ಮಹಾ ಟ್ವಿಸ್ಟ್​: ಕೊನೆ ಕ್ಷಣದಲ್ಲಿ ಬದಲಾಯ್ತು ನಿರ್ಧಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts