More

    ಅನ್ನದಾತ, ಪಶು ಪಕ್ಷಿಗಳು ಹೈರಾಣ

    ಮಹಾಲಿಂಗಪುರ: ವಾರದಿಂದ ದಿನವೂ ಸುರಿಯುತ್ತಿರುವ ಗುಡುಗು, ಮಿಂಚು ಮಿಶ್ರಿತ ಮಳೆಯಿಂದಾಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಗುಡುಗಿನ ಗರ್ಜನೆಗೆ ಹಿರಿಯರು ಮಾತ್ರವಲ್ಲದೆ ಮನೆಯಲ್ಲಿ ಮಲಗಿದ ಮಕ್ಕಳು ಹೆದರಿ ಎದ್ದು ಕುಳಿತರು. ಗಿಡಗಳಲ್ಲಿಯ ಪಕ್ಷಿಗಳು, ತೋಟದ ಮನೆಗಳಲ್ಲಿಯ ಜಾನುವಾರಗಳು ಬೆದರಿದವು. ಅಷ್ಟೊಂದು ಭೀಕರ ಶಬ್ದ ಅದಾಗಿತ್ತು. ಈ ಭಾಗದ ಕೆರೆ, ಹಳ್ಳ , ಹೊಂಡಗಳು ತುಂಬಿ ಹರಿಯುತ್ತಿದ್ದು, ಕೃಷಿ ಹೊಂಡ ಮತ್ತು ಬಾವಿಯಲ್ಲಿನ ನೀರಿನ ಮಟ್ಟ ಭೂಮಿಯ ಮಟ್ಟಕ್ಕೆ ಕೆಲವೆಡೆ ಸಮವಾಗಿದ್ದರೆ ಇನ್ನು ಕೆಲವೆಡೆ ಹೊರ ಚೆಲ್ಲುತ್ತಿದೆ.

    ಹೊಲದಲ್ಲಿಯ ಕಬ್ಬು, ಬಾಳೆ, ಅರಿಶಿಣ, ಗೋವಿನಜೋಳ ಮುಂತಾದ ಬೆಳೆಗಳು ನೀರಿನಲ್ಲಿ ನಿಂತಿವೆ. ಅಲ್ಲದೆ, ಮಳೆ ಹೊಡೆತಕ್ಕೆ ಕಬ್ಬಿನ ಗಿಡಗಳು ನೆಲಕ್ಕುರುಳಿವೆ. ಗ್ರಾಮೀಣ ಭಾಗದ ತೋಟದ ರಸ್ತೆಗಳು ನೀರು ನಿಂತು ಹಳ್ಳದಂತಾಗಿವೆ. ಸೊಂಪಾಗಿ ಬೆಳೆದ ಅರಿಶಿಣ ಕೊಳೆಯಲಾರಂಭಿಸಿದೆ. ಕಟಾವಿಗೆ ಬಂದ ಗೋವಿನಜೋಳದ ತೆನೆಗಳಲ್ಲಿಯ ಕಾಳುಗಳು ನೆನೆದು ಮೊಳಕೆಯೊಡೆಯುತ್ತಿವೆ. ಗೋವಿನ ಜೋಳದ ಕಣಿಕೆ (ಮೇವು) ನೆನೆದು ರಾಡಿಯಾಗಿ ದನಕರುಗಳು ತಿನ್ನದಂತಾಗಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts