More

    ರೈತರ ಆರ್ಥಿಕ ಸದೃಢತೆಗೆ ಸಂಘಗಳು ಸಹಕಾರಿ

    ಮಹಾಲಿಂಗಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತ ಸ್ನೇಹಿಯಾಗಿದ್ದು, ಹಣ ಇದ್ದವರು ಠೇವಣಿಯಿಡಿ, ಹಣದ ಅವಶ್ಯಕತೆಯಿದ್ದವರು ಸಾಲ ಪಡೆದು ಸಕಾಲದಲ್ಲಿ ಪಾವತಿಸುತ್ತ ಆರ್ಥಿಕವಾಗಿ ಸದೃಢವಾಗಬೇಕು ಎಂದು ಶಾಸಕ ಸಿದ್ದು ಸವದಿ ಸಲಹೆ ನೀಡಿದರು.

    ಸಮೀಪದ ಕೆಸರಗೊಪ್ಪ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಮತ್ತು ಸುವರ್ಣ ಮಹೋತ್ಸವ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಬ್ಯಾಂಕ್‌ನ ಸೇಫ್ ಲಾಕರ್ ಉದ್ಘಾಟಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೆವಾಡ, ಕೆಸರಗೊಪ್ಪ ಪಿಕೆಪಿಎಸ್ ಇನ್ನಷ್ಟು ಎತ್ತರಕ್ಕೆ ಬೆಳೆಯಲು ನೀವೆಲ್ಲರೂ ಠೇವಣಿ ಇಟ್ಟು ಸಹಕರಿಸಬೇಕು ಎಂದು ಹೇಳಿದರು.

    ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿದರು. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಬಿ.ಜಿ. ಸಸಾಲಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮುಧೋಳ ತಾಪಂ ಅಧ್ಯಕ್ಷೆ ವೀಣಾ ದೇಸಾಯಿ, ಕೆಸರಗೊಪ್ಪ ಗ್ರಾಪಂ ಅಧ್ಯಕ್ಷ ಬಸವರಾಜ ಶಿರೋಳ, ಈರಪ್ಪ ದಿನ್ನಿಮನಿ, ಎಸ್.ಎಂ. ದೇಸಾಯಿ, ಎಸ್.ಆರ್. ಬಾಡಗಿ, ಧರೆಪ್ಪ ಬ್ಯಾಕೋಡ, ಗುರುಸಿದ್ದಪ್ಪ ಚಿನಗುಂಡಿ, ಭೀಮಪ್ಪ ಸಂಶಿ, ಪರಪ್ಪ ಬ್ಯಾಕೋಡ, ದುಂಡಪ್ಪ ಜಾಧವ, ಕಲ್ಲಪ್ಪ ನಾಶಿ, ಶಿವರಾಯಪ್ಪ ಮೋಪಗಾರ, ಠಾಣಾಧಿಕಾರಿ ರಾಜು ಬೀಳಗಿ, ಪರಪ್ಪ ಢವಳೇಶ್ವರ, ಚಂದ್ರಪ್ಪ ಶಿರೋಳ ಇತರರಿದ್ದರು. ಕಾರ್ಯ ನಿರ್ವಹಣಾಧಿಕಾರಿ ಬಸವರಾಜ ಮಿರ್ಜಿ ಸ್ವಾಗತಿಸಿ, ವರದಿ ವಾಚಿಸಿದರು. ಮಹಾಲಿಂಗ ಉಳ್ಳಾಗಡ್ಡಿ ವಂದಿಸಿದರು. ಶೇಗುಣಸಿ ಗುರುಗಳು ನಿರೂಪಿಸಿದರು. ಸಿ.ಪಿ.ಚೌದರಿ ಪರಿಚಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts