More

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಆಯುಕ್ತರಾಗಿ ಡಾ. ಮಹಾದೇವ್​

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಐಎಎಸ್​ ಅಧಿಕಾರಿ ಡಾ. ಎಚ್​.ಆರ್​.ಮಹಾದೇವ್​ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    2019ರ ಆಗಸ್ಟ್​ನಿಂದ ಬಿಡಿಎ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿ.ಸಿ.ಪ್ರಕಾಶ್​ ಅವರನ್ನು ಮೈಸೂರಿನ ಪ್ರಾದೇಶಿಕ ಅಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಮೈಸೂರು ವಿಭಾಗದಲ್ಲಿ ಕರೊನಾ ವೈರಸ್​ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವ ಉಸ್ತುವಾರಿಯನ್ನು ಕೂಡ ಪ್ರಕಾಶ್​ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

    ಇದನ್ನೂ ಓದಿ: ನಿಲ್ದಾಣ ಸ್ವಲ್ಪ ದೂರ ಇರುವಾಗಲೇ ತುರ್ತು ಸರಪಳಿ ಎಳೆದ ವಲಸೆ ಕಾರ್ಮಿಕರು ಅರೆಸ್ಟ್​

    ಪ್ರಕಾಶ್​ ಅವರ ಜಾಗಕ್ಕೆ ನೇಮಕಗೊಂಡಿರುವ ಡಾ.ಮಹಾದೇವ್​ ಅವರು 2008ನೇ ಬ್ಯಾಚ್​ನ ಐಎಎಸ್​ ಅಧಿಕಾರಿ. ಇವರು ಕಳೆದೆರಡು ವರ್ಷಗಳಿಂದ ಬೀದರ್​ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಈಗ ಮಹಾದೇವ್​ ಅವರ ಜಾಗಕ್ಕೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಷ್ಟ್ರೀಯ ಆರೋಗ್ಯ ಮಿಷನ್​ ಹಾಗೂ ಆರೋಗ್ಯ ನಿರ್ದೇಶನಾಲಯದ ನಿರ್ದೇಶಕ ರಾಮಚಂದ್ರನ್​ ಅವರನ್ನು ನೇಮಕ ಮಾಡಲಾಗಿದೆ. ರಾಮಚಂದ್ರನ್​ ಅವರ ಜಾಗಕ್ಕೆ ಬೀದರ್​ನ ಜಿಲ್ಲಾಧಿಕಾರಿಯಾಗಿರುವ ಡಾ.ಅರುಂಧತಿ ಚಂದ್ರಶೇಖರ್​ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts