More

    ದಾಸರ ಪದಕ್ಕೆ ಮಧ್ವಾಚಾರ್ಯರ ಸಿದ್ಧಾಂತ ಮೂಲ

    ಶಿವಮೊಗ್ಗ:ಮಧ್ವಾಚಾರ್ಯರ ಸಿದ್ಧಾಂತದ ಮೇಲೆ ದಾಸರ ಪದಗಳು ಸೃಷ್ಟಿಯಾಗಿವೆ. ದಾಸರು ನೀಡಿದ ಸಾಹಿತ್ಯ ರತ್ನವನ್ನು ಹಂಚುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದು ಹರಿದಾಸ ಸಂಗೀತರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದರು.

    ಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯದಲ್ಲಿ ಸಂಗೀತ ಸಮರ್ಪಣ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಸುಗಮ ಸಂಗೀತ ಹಾಗೂ ದಾಸರ ಪದಗಳ ಕಲಿಕಾ ಶಿಬಿರದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ದಾಸ ಸಾಹಿತ್ಯದ ಕಂಪನ್ನು ಪಸರಿಸುತ್ತಿರುವ ನಮ್ಮ ನಾಡಿನ ಪ್ರಖ್ಯಾತ ಗಾಯಕರನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ ಎಂದರು.
    ದಾಸರ ಭಕ್ತರಾದ ನಾವುಗಳು, ಪರಮಾತ್ಮನನ್ನು, ದಾಸರನ್ನು, ಗುರುಗಳನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ದಾಸರೆಂದರೆ ದೀಕ್ಷೆ ಪಡೆದವರೆಂದರ್ಥ, ನಾವೆಲ್ಲ ಅವರ ಅವರ ಅನುಯಾಯಿಗಳು. ಆಧ್ಯಾತ್ಮ ದ ಚಿಂತನೆ ಮೂಲಕ ನಾವು ಪರಮಾತ್ಮನನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.
    ಸುಲಭವಾದ ದಾಸ ಸಾಹಿತ್ಯ ವಿಚಾರಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದೆ. ದಾಸರ ಪದಗಳು ಹೇಗೆ? ಏಕೆ ಬಂತು? ಎಂಬುದು ಮುಖ್ಯ. ನಾವು ಹೇಗೆ ಬದುಕಬೇಕು? ಒಳಾರ್ಥ, ಹೊರಾರ್ಥ, ಗೂಢಾರ್ಥಗಳನ್ನು ತಿಳಿಸುವುದೇ ದಾಸ ಸಾಹಿತ್ಯ. ದಾಸ ಸಾಹಿತ್ಯ ನಮಗೆ ಅರಿವಿಲ್ಲದಂತೆ ಔನತ್ಯದತ್ತ ಕೊಂಡೊಯ್ಯುತ್ತದೆ ಎಂದರು.
    ಶಿಬಿರ ಉದ್ಘಾಟಿಸಿ ಮಾತನಾಡಿದ ಹಿರಿಯ ತಬಲ ವಾದಕ ಪಂಡಿತ್ ತುಕಾರಾಂ ರಂಗಧೋಳ್, ನಮ್ಮ ಜನ್ಮ ಸಾರ್ಥಕಗೊಳಿಸಿಕೊಳ್ಳಲು ಭಕ್ತಿ ಮಾರ್ಗ ಸಹಕಾರಿಯಾಗಿದೆ. ಕಲಿಕೆ ಎಂಬುದು ಮುಗಿಯದ ಕೃಷಿಯಾಗಿದ್ದು, ಭಾವ ಶುದ್ಧಿಯಿಂದ ಇಂತಹ ಶಿಬಿರದಲ್ಲಿ ಭಾಗವಹಿಸುವುದು ಅವಶ್ಯ ಎಂದು ಹೇಳಿದರು.
    ಆಧ್ಯಾತ್ಮ ಚಿಂತಕ ಶಬರೀಶ್ ಕಣ್ಣನ್, ಸಂಗೀತ ಸಮರ್ಪಣ ಟ್ರಸ್ಟ್ ಅಧ್ಯಕ್ಷೆ ಸುರೇಖಾ ಹೆಗಡೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts