More

    ಮಾಸ್ಕ್​ ಧರಿಸಿ, ಡೆಟಾಲ್​ ಹ್ಯಾಂಡ್​ ವಾಶ್​ ತರುವವರಿಗೆ ಮಾತ್ರ ಶಾಲೆಯೊಳಗೆ ಪ್ರವೇಶ: ಶಾಲೆಯ ಆದೇಶಕ್ಕೆ ಕಂಗಾಲಾದ ಪೋಷಕರು

    ಮದ್ದೂರು: ರಾಜ್ಯದಲ್ಲಿ ಕರೋನಾ ವೈರಸ್​ ಭೀತಿ ಹೆಚ್ಚಾದ ಹಿನ್ನೆಲೆ ಬೆಂಗಳೂರಿನಲ್ಲಿ 5ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮದ್ದೂರಿನ ಶಾಲೆಯೊಂದರಲ್ಲಿ ನೀಡಲಾಗಿರುವ ಆದೇಶವು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.

    ಮದ್ದೂರು ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಕರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮೌಖಿಕ ಆದೇಶವನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕಾಗಿದ್ದು, ಶಾಲೆಗೆ ಡೆಟಾಲ್​ ಹ್ಯಾಂಡ್​ ವಾಶ್​ ತರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ಆದೇಶವನ್ನು ಪಾಲಿಸದಿದ್ದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಮಾಸ್ಕ್​ ಮತ್ತು ಡೆಟಾಲ್​ ಹ್ಯಾಂಡ್​ ವಾಶ್​ ಇಲ್ಲದೆ ಶಾಲೆಗೆ ಬರಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.

    ಶಾಲೆಯಲ್ಲಿ ಮಾಡಲಾಗಿರುವ ಈ ಆದೇಶವು ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪೋಷಕರೆಲ್ಲರೂ ಮೆಡಿಕಲ್​ ಶಾಪ್​ಗಳಿಗೆ ದೌಡಾಯಿಸಿದ್ದು, ಅಲ್ಲಿ ಮಾಸ್ಕ್​ ಮತ್ತು ಹ್ಯಾಂಡ್​ ವಾಶ್​ನ ಅಭಾವವಿರುವ ಕಾರಣ ಪರದಾಡುವಂತಾಗಿದೆ. (ದಿಗ್ವಿಜಯ ನ್ಯೂಸ್​)

    ಆರ್​ಎಸ್​ಎಸ್​ನ ಅನುಭವ ಹಂಚಿಕೊಂಡ ಪ್ರಸಿದ್ಧ ನಟ: ಹಾಟ್​ ಸಂಘಿ ಎಂದು ವೈರಲ್​ ಮಾಡಿದ ನೆಟ್ಟಿಗರು

    ಕರೊನಾ ವೈರಸ್​ ಎಫೆಕ್ಟ್​: ವಿದೇಶಿ ಪ್ರಜೆಗಳ ವೀಸಾ ಅಮಾನತುಪಡಿಸಿದ ವಿದೇಶಾಂಗ ಸಚಿವಾಲಯ

    ರಾಜ್ಯದಲ್ಲಿ ಶಂಕಿತ ಕರೊನಾ ವೈರಸ್​ಗೆ ಮೊದಲ ಬಲಿ: ಕಲಬುರಗಿಯಲ್ಲಿ 75 ವರ್ಷದ ವೃದ್ಧ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts