More

    ಶ್ರೀಕೃಷ್ಣನ ತತ್ವಾದರ್ಶ ಎಲ್ಲರಿಗೂ ಮಾದರಿ : ದಯಾನಂದ ಕೆಲೂರ

    ವಿಜಯಪುರ: ಶ್ರೀಕೃಷ್ಣನ ತತ್ವಾದರ್ಶಗಳು ಎಲ್ಲರಿಗೂ ಮಾದರಿ ಆಗಿದೆ ಎಂದು ವೇದ ಅಕಾಡೆಮಿಯ ಉಪಾಧ್ಯಕ್ಷ ದಯಾನಂದ ಕೆಲೂರ ಹೇಳಿದರು.

    ನಗರದ ವೇದ ಅಕಾಡೆಮಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದುಷ್ಟ ಕಂಸನ ತಂಗಿ ದೇವಕಿಯ ಮಗನಿಂದಲೇ ಸೋದರಮಾವನ ಸಂಹಾರವೆಂಬ ಅಶರೀರವಾಣಿಯನ್ನು ಕೇಳಿದ ಕಂಸನು ಗಾಬರಿಗೊಂಡು ವಸುದೇವ, ದೇವಕಿಯ ಏಳು ಮಕ್ಕಳನ್ನು ಸಂಹಾರ ಮಾಡುತ್ತಾನೆ. ಎಂಟನೆಯ ಮಗನೇ ಶ್ರೀಕೃಷ್ಣ. ಕಂಸನು ಈತನನ್ನೂ ಸಹ ಕೊಲ್ಲುವನೆಂಬ ಭಯದಿಂದ ವಸುದೇವನು ರಾತ್ರೋರಾತ್ರಿ ಯಮುನಾ ನದಿಯ ದಂಡೆಯ ಮೇಲಿನ ಯಶೋಧೆಯ ಮನೆಯಲ್ಲಿ ಬಿಟ್ಟು, ಅಲ್ಲಿಯೇ ಬೆಳೆದು ದೊಡ್ಡವನಾಗಿ ಕೊನೆಗೊಂದು ದಿನ ರಾಕ್ಷಸನೆಂಬ ಕಂಸನನ್ನು ಸಂಹಾರ ಮಾಡಿದ ಕಥೆಯನ್ನು ನೆನಪಿಸಿದರು.

    ವೇದ ಅಕಾಡೆಮಿಯ ನಿರ್ದೇಶಕಿ ಆಡಳಿತಾಧಿಕಾರಿ ಜ್ಯೋತಿ ದೇಸಾಯಿ ಮಾತನಾಡಿ, ಶ್ರೀಕೃಷ್ಣನು ಸಿರಿ ಸಂಪತ್ತಿನ ಐಶ್ವರ್ಯದಲ್ಲಿದ್ದರೂ ಕೂಡ ಬಾಲ್ಯದ ಗೆಳೆಯ ಸುಧಾಮನನ್ನು ಮರೆಯಲ್ಲ, ಕಡು ಬಡತನದಲ್ಲಿದ್ದ ಸುಧಾಮನಿಗೆ ರಾಜಾದಿತ್ಯ ನೀಡಿ ಆತನಿಗೆ ಮಾಡಿದ ಸಹಾಯ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಇದ್ದರೆ ಇರಬೇಕು ಇವರಿಬ್ಬರಂತೆ ಸ್ನೇಹ ಎಂದರು.

    ಎನ್.ಜಿ.ಯರನಾಳ ಮಾತನಾಡಿದರು. ಎಕ್ಸಲಂಟ್ ಶಾಲೆಯ ಆಡಳಿತಾಧಿಕಾರಿ ಅನಿಲಕುಮಾರ ಅಂಕದ, ಮುಖ್ಯಶಿಕ್ಷಕ ಮಂಜುನಾಥ ಎಂ.ಎಂ, ರಶ್ಮಿ ಕವಟಗಿಮಠ ಹಾಗೂ ಸುರೇಶ ಜತ್ತಿ, ಶಿಕ್ಷಕಿಯರಾದ ಅಂಬುಜಾ ದೇಶಪಾಂಡೆ, ಅಮೃತಾ ಚನವೀರ, ಸನಾ ಇನಾಮದಾರ, ರೇಣುಕಾ ಹೋಳಿ ಇತರರು ಉಪಸ್ಥಿತರಿದ್ದರು.

    ಇದೇ ವೇಳೆ ಶಾಲೆ ಮಕ್ಕಳು ಕೃಷ್ಣ, ರಾಧೆಯ ವೇಷಧರಿಸಿದ್ದು ಎಲ್ಲರ ಗಮನ ಸೆಳೆಯಿತು. ನೃತ್ಯ, ಸಣ್ಣ ನಾಟಕಗಳು ತುಂಬಾ ಮನಮೋಹಕವಾಗಿದ್ದವು. ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts