More

    ಲಾಕ್‌ಡೌನ್ ಸಡಿಲಿಸಿದರೂ ನಿಯಮ ಪಾಲಿಸಿ

    ನಿಪ್ಪಾಣಿ: ಬೆಳಗಾವಿ ಜಿಲ್ಲೆ ಕಿತ್ತಳೆ ವಲಯದಲ್ಲಿದ್ದು, ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮೊದಲಾದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಪಾಲಿಸಿದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಬರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಲಾಕ್‌ಡೌನ್ ನಿಯಮಗಳ ಸಡಿಲಿಕೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭೆಯ ಸಭಾಂಗಣದಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಹಾಗೂ ಸಂಚಾರಕ್ಕೆ ಅವಕಾಶವಿದೆ. ಕಿರಾಣಿ ಅಂಗಡಿಗಳು ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ತೆರೆಯಲು ಅವಕಾಶವಿದೆ. ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಸಂಚರಿಸಬಹುದು. ಮೇ 30ರ ವರೆಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ಉದ್ದೇಶವಿಲ್ಲ. ಅಲ್ಲಿಯವರೆಗೆ ಆಹಾರ-ಧಾನ್ಯಗಳನ್ನು ಮನೆಮನೆಗೆ ಹೋಗಿ ಅಂಗನವಾಡಿ ಕಾರ್ಯಕರ್ತೆಯರು ವಿತರಿಸುವ ಕಾರ್ಯ ಮುಂದುವರಿಯಲಿದೆ. 144ನೇ ಕಲಂ ಮುಂದುವರಿಯಲಿದೆ. ಸಭೆ ಸಮಾರಂಭಗಳು ನಡೆಯುವುದಿಲ್ಲ. ಮದುವೆ ಸಮಾರಂಭವು ಮಾತ್ರ 50 ಜನರೊಂದಿಗೆ ನಡೆಸಲು ಅವಕಾವಿದೆ. ಬಸ್ ಸಂಚಾರ ಇರುವುದಿಲ್ಲ. ಮಂದಿರ, ಮಸೀದಿ, ಚರ್ಚ್‌ಗಳು ಬಂದ್ ಇರಲಿವೆ. ವಾರದ ಸಂತೆಗೂ ಅವಕಾವಿಲ್ಲ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಅಂತಾರಾಜ್ಯ ಪ್ರಯಾಣಕ್ಕಾಗಿ ಸೇವಾ ಸಿಂಧು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ ನೀಡಿದರು.

    ತಾಪಂ ಇಒ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ಸಿಪಿಐ ಸಂತೋಷ ಸತ್ಯನಾಯಿಕ, ಪಿಎಸ್‌ಐ ಕುಮಾರ ಹಾಡಕರ, ಬಿ.ಜಿ. ಸುಬ್ಬಾಪುರಮಠ, ಸಿಡಿಪಿಒ ಸುಮಿತ್ರಾ ಡಿ.ಬಿ., ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಮಹಾವೀರ ಬೋರಣ್ಣವರ ನಿರ್ವಹಿಸಿದರು.

    ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಸಂಚಾರ ಮಾಡಬಹುದು. ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದೆ. ಅತ್ಯವಶ್ಯಕ ವಸ್ತುಗಳೊಂದಿಗೆ ಕಟ್ಟಡಕ್ಕೆ ಸಂಬಂಧಿಸಿದ ಅಂಗಡಿಗಳು ಮೇ 4ರಿಂದ ತೆರೆಯಲಿವೆ ಎಂದರು.
    | ಪ್ರಕಾಶ ಗಾಯಕವಾಡ ತಹಸೀಲ್ದಾರ್, ನಿಪ್ಪಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts